’ಆನ್‌ಲೈನ್‌ ಪರೀಕ್ಷೆ ನಿಲ್ಲಿಸದಿದ್ದರೆ ಬಿಜೆಪಿಗೆ ಮತ ಇಲ್ಲ’

7
ಗಣರಾಜ್ಯೋತ್ಸವದ ದಿನ ವಿದ್ಯಾರ್ಥಿಗಳಿಗೆ ಪ್ರತಿಜ್ಞೆ

’ಆನ್‌ಲೈನ್‌ ಪರೀಕ್ಷೆ ನಿಲ್ಲಿಸದಿದ್ದರೆ ಬಿಜೆಪಿಗೆ ಮತ ಇಲ್ಲ’

Published:
Updated:

ಇಟರ್ಸಿ (ಮಧ್ಯಪ್ರದೇಶ): ಆನ್‌ಲೈನ್‌ ಪರೀಕ್ಷೆ ನಿಲ್ಲಿಸುವವರೆಗೂ ಬಿಜೆಪಿಗೆ ಯಾವುದೇ ರೀತಿ ಬೆಂಬಲ ನೀಡುವುದಿಲ್ಲ ಹಾಗೂ ಆ ಪಕ್ಷಕ್ಕೆ ಮತ ನೀಡದಿರಲು ಇಲ್ಲಿನ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಪ್ರತಿಜ್ಞೆ ತೆಗೆದುಕೊಂಡಿದ್ದಾರೆ.

ಮಧ್ಯ ಪ್ರದೇಶದ ಇಟರ್ಸಿಯ ‘ವಿಜಯಲಕ್ಷ್ಮಿ ಕೈಗಾರಿಕಾ ತರಬೇತಿ ಸಂಸ್ಥೆ’ಯಲ್ಲಿ ಬೋಧಕರು ವಿದ್ಯಾರ್ಥಿಗಳಿಗೆ ಪ್ರತಿಜ್ಞೆಯ ಸಾಲುಗಳನ್ನು ಬೋಧಿಸಿದ್ದಾರೆ. ಎಎನ್‌ಐ ಈ ಕುರಿತ ವಿಡಿಯೊ ಪ್ರಕಟಿಸಿದೆ.

‘ಆನ್‌ಲೈನ್‌ ಪರೀಕ್ಷೆ ನಿಲ್ಲಿಸಬೇಕು. ಮುಂದಿನ 24 ಗಂಟೆಗಳಲ್ಲಿ ಕನಿಷ್ಠ ಮೂವರಿಗೆ ಈ ಕುರಿತು ತಿಳಿಸಿ ಪ್ರತಿಜ್ಞೆ ಪಡೆಯುವಂತೆ ಹೇಳುವೆ. ಬಿಜೆಪಿಯ ಭ್ರಷ್ಟಾಚಾರ, ಅನ್ಯಾಯದ ಕುರಿತು ನಮ್ಮ ಸುತ್ತಲಿನವರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತೇನೆ’ ಎಂದು ಪ್ರತಿಜ್ಞೆ ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry