10.42 ಲಕ್ಷ ಮಕ್ಕಳಿಗೆ ಪೋಲಿಯೊ ಹನಿ

7
ಬಿಬಿಎಂಪಿ ವ್ಯಾಪ್ತಿಯ ಮೊದಲ ಹಂತದ ಕಾರ್ಯಕ್ರಮಕ್ಕೆ ಚಾಲನೆ

10.42 ಲಕ್ಷ ಮಕ್ಕಳಿಗೆ ಪೋಲಿಯೊ ಹನಿ

Published:
Updated:

ಬೆಂಗಳೂರು: ಪೋಲಿಯೊ ನಿರ್ಮೂಲನೆ ಅಭಿಯಾನದ ಮೊದಲ ಹಂತದಲ್ಲಿ ನಗರದ ಕೇಂದ್ರ ಭಾಗದಲ್ಲಿ ಭಾನುವಾರ ಶೇ 74.56ರಷ್ಟು ಹಾಗೂ ಹೊರ ವಲಯದಲ್ಲಿ ಶೇ 88.20ರಷ್ಟು ಮಕ್ಕಳಿಗೆ ಹನಿ ಹಾಕಲಾಗಿದೆ.

ನಗರ ಹಾಗೂ ಹೊರವಲಯದಲ್ಲಿ ಒಟ್ಟು 10.42 ಲಕ್ಷ ಮಕ್ಕಳಿಗೆ ಹನಿ ಹಾಕಲಾಗಿದೆ.

ಬಿಬಿಎಂಪಿಯ ದಾಸಪ್ಪ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮೇಯರ್‌ ಆರ್‌.ಸಂಪತ್‌ ರಾಜ್‌, ಉಪಮೇಯರ್‌ ಪದ್ಮಾವತಿ ನರಸಿಂಹಮೂರ್ತಿ ಹಾಗೂ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಆರ್‌.ವಿ.ದೇವರಾಜ್‌ ಅವರು ಮಕ್ಕಳಿಗೆ ಹನಿ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

‌ನಗರದ 135 ವಾರ್ಡ್‌ಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ 5.41 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ಇದರಲ್ಲಿ 4.03 ಲಕ್ಷ ಮಕ್ಕಳಿಗೆ ಲಸಿಕೆ ಹಾಕಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದರು.

ಉಳಿದಂತೆ ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ, ಉತ್ತರ, ಪೂರ್ವ ಹಾಗೂ ಆನೇಕಲ್ ತಾಲ್ಲೂಕು ವ್ಯಾಪ್ತಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲಕ ಹನಿ ಹಾಕಲಾಗಿದೆ. ಒಟ್ಟು 6.39 ಲಕ್ಷ ಮಕ್ಕಳಿಗೆ ಹನಿ ಹಾಕುವ ಗುರಿ ಹೊಂದಲಾಗಿತ್ತು. ಇದರಲ್ಲಿ 5.08 ಲಕ್ಷ ಮಕ್ಕಳಿಗೆ ಹನಿ ಹಾಕಲಾಗಿದೆ ಎಂದು ತಿಳಿಸಿದರು.

ಕೆಲವು ಮಕ್ಕಳು ಭಾನುವಾರ ಹನಿ ಹಾಕಿಸಿಲ್ಲ. ಅಂತಹ ಮಕ್ಕಳಿಗೆ ಹನಿ ಹಾಕಿಸಲು ಕಾರ್ಯಕರ್ತರು ಇನ್ನೂ ಮೂರು ದಿನಗಳವರೆಗೆ ಮನೆ ಮನೆಗೆ ಭೇಟಿ ನೀಡಲಿದ್ದಾರೆ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry