ಶ್ರೀಮಂತ ಸಂಸದರು ವೇತನ ತ್ಯಜಿಸಲಿ: ವರುಣ್‌ ಗಾಂಧಿ

7

ಶ್ರೀಮಂತ ಸಂಸದರು ವೇತನ ತ್ಯಜಿಸಲಿ: ವರುಣ್‌ ಗಾಂಧಿ

Published:
Updated:
ಶ್ರೀಮಂತ ಸಂಸದರು ವೇತನ ತ್ಯಜಿಸಲಿ: ವರುಣ್‌ ಗಾಂಧಿ

ನವದೆಹಲಿ: ಪ್ರಸಕ್ತ ಲೋಕಸಭೆಯ ಇನ್ನುಳಿದ ಅವಧಿಗೆ ಶ್ರೀಮಂತ ಸಂಸದರು ಸ್ವಯಂ ಪ್ರೇರಿತರಾಗಿ ವೇತನ ತ್ಯಜಿಸಬೇಕು. ಈ ಬಗ್ಗೆ ತಾವು ಮುಖಂಡತ್ವ ವಹಿಸಬೇಕು ಎಂದು ಲೋಕಸಭೆ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರಿಗೆ ಸಂಸದ ವರುಣ್‌ ಗಾಂಧಿ ಪತ್ರ ಬರೆದಿದ್ದಾರೆ. 

ಲೋಕಸಭೆಯ ಇನ್ನುಳಿದ ಅವಧಿಗೆ ಶ್ರೀಮಂತ ಸಂಸದರು ವೇತನವನ್ನು ತ್ಯಜಿಸಿ ಹೊಸ ಆಂದೋಲನಕ್ಕೆ ಸ್ವಯಂ ಪ್ರೇರಿತರಾಗಿ ಕೈ ಜೋಡಿಸಬೇಕು ಎಂದು ವರುಣ್ ಮನವಿ ಮಾಡಿದ್ದಾರೆ.

ಸಂಸದರು ತೆಗೆದುಕೊಳ್ಳುವ ಸ್ವಯಂ ಪ್ರೇರಿತ ನಿರ್ಧಾರದಿಂದ ಚುನಾಯಿತ ಪ್ರತಿನಿಧಿಗಳ ಬಗ್ಗೆ ಸಮಾಜದಲ್ಲಿ ಸಕಾರಾತ್ಮಕ ಸಂದೇಶ ರವಾನೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry