ವಿದೇಶಾಂಗ ಕಾರ್ಯದರ್ಶಿಯಾಗಿ ವಿಜಯ್​ ಗೋಖಲೆ ಅಧಿಕಾರ ಸ್ವೀಕಾರ

7

ವಿದೇಶಾಂಗ ಕಾರ್ಯದರ್ಶಿಯಾಗಿ ವಿಜಯ್​ ಗೋಖಲೆ ಅಧಿಕಾರ ಸ್ವೀಕಾರ

Published:
Updated:
ವಿದೇಶಾಂಗ ಕಾರ್ಯದರ್ಶಿಯಾಗಿ ವಿಜಯ್​ ಗೋಖಲೆ ಅಧಿಕಾರ ಸ್ವೀಕಾರ

ನವದೆಹಲಿ: ಭಾರತದ ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ವಿಜಯ್‌ ಕೇಶವ್‌ ಗೋಖಲೆ ಅವರು ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.

ಎಸ್​. ಜಯಶಂಕರ್​ ಅವರು ಭಾನುವಾರ ನಿವೃತ್ತರಾದ ಹಿನ್ನಲೆಯಲ್ಲಿ ಅವರ ಸ್ಥಾನಕ್ಕೆ ವಿಜಯ್​ ಗೋಖಲೆ ಅವರು ನೇಮಕಗೊಂಡಿದ್ದಾರೆ.

ಭಾರತೀಯ ವಿದೇಶಾಂಗ ಸೇವೆಯ 1981ನೇ ಬ್ಯಾಚ್‌ನವರಾದ ಕೇಶವ್ ಗೋಖಲೆ ಅವರು, ಹಾಂಕಾಂಗ್‌, ಹನೊಯ್‌, ಬೀಜಿಂಗ್‌ ಮತ್ತು ನ್ಯೂಯಾರ್ಕ್‌ಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಚೀನಾ ಮತ್ತು ಪೂರ್ವ ಏಷ್ಯಾ ವಿಭಾಗಗಳ ನಿರ್ದೇಶಕರಾಗಿ ಮತ್ತು ಪೂರ್ವ ಏಷ್ಯಾದ ಜಂಟಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.

ಚೀನಾದೊಂದಿಗೆ ವಿದೇಶಾಂಗ ವ್ಯವಹಾರಕ್ಕೆ ಸಂಬಂಧಿಸಿದಂತೆ ವಿವಿಧ ವಿಚಾರಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಗೋಖಲೆ, ಚೀನಿ ಭಾಷೆಯನ್ನು ಅಸ್ಖಲಿತವಾಗಿ ಮಾತನಾಡುವ ಪರಿಣತಿ ಹೊಂದಿದ್ದಾರೆ. ಅತ್ಯಂತ ಸಮರ್ಥ ಹಾಗೂ ವಿವೇಕವುಳ್ಳ ಅಧಿಕಾರಿಗಳಲ್ಲಿ ಒಬ್ಬರು ಎಂಬ ಮೆಚ್ಚುಗೆ ಗಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry