‘ಸಿದ್ದರಾಮಯ್ಯನನ್ನು ಹೊತ್ತು ತಿರುಗಿದ್ದೇನೆ’

7

‘ಸಿದ್ದರಾಮಯ್ಯನನ್ನು ಹೊತ್ತು ತಿರುಗಿದ್ದೇನೆ’

Published:
Updated:

ನಾಗಮಂಗಲ: ‘ಜೆಡಿಎಸ್‌ನಲ್ಲಿ ಜಾತಿ ಇಲ್ಲ. ಜಾತಿ ಮಾಡಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯನನ್ನು ತಲೆ ಮೇಲೆ ಹೊತ್ತು ತಿರುಗುತ್ತಿರಲಿಲ್ಲ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದರು. ತಾಲ್ಲೂಕಿನ ಪಿ.ನೇರಲೆಕೆರೆಯಲ್ಲಿ ಭಾನುವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಜೆಡಿಎಸ್‌ನಿಂದ ಬೆಳೆದವರೇ ಪಕ್ಷವನ್ನು ಕೊಲ್ಲಲು ಹೊರಟಿದ್ದಾರೆ. ನಾನು ಜೀವಂತ ಇರುವವರೆಗೂ ಅದು ಸಾಧ್ಯವಿಲ್ಲ. ಪಕ್ಷಕ್ಕೆ ದ್ರೋಹ ಬಗೆದವರಿಗೆ ಮುಂಬರುವ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಬೇಕು. ನನ್ನ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದಂತೆ ಬದುಕಿದ್ದೇನೆ. ಅದನ್ನು ನನ್ನ ಜೀವನಚರಿತ್ರೆಯಲ್ಲಿ ತೆರೆದಿಡುತ್ತೇನೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry