ಬ್ಯಾಂಕ್ ದರೋಡೆಗೆ ಯತ್ನ

7

ಬ್ಯಾಂಕ್ ದರೋಡೆಗೆ ಯತ್ನ

Published:
Updated:
ಬ್ಯಾಂಕ್ ದರೋಡೆಗೆ ಯತ್ನ

ತುಮಕೂರು: ಕ್ಯಾತ್ಸಂದ್ರ ಸಮೀಪದ ಹಿರೇಹಳ್ಳಿಯಲ್ಲಿ ಭಾನುವಾರ ರಾತ್ರಿ ಎಸ್ ಬಿಐ ಬ್ಯಾಂಕ್ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ದರೋಡೆಗೆ ಯತ್ನಿಸಲಾಗಿದೆ. ಭದ್ರತಾ ಸಿಬ್ಬಂದಿ ಯೋಗೀಶ್ ಗಾಯಗೊಂಡಿದ್ದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾತ್ರಿ 12  ಗಂಟೆಯ ಹೊತ್ತಿಗೆ ದರೋಡೆ ಯತ್ನ ನಡೆದಿದೆ. ನಾವು ನೈಟ್ ರೌಂಡ್ಸ್ ನಲ್ಲಿದ್ದ ಪೊಲೀಸರು ಬ್ಯಾಂಕ್ ಕಡೆಯತ್ತ ಬರುತ್ತಿದ್ದುದನ್ನು ಕಂಡ ದರೋಡೆಕೋರರು ಪರಾರಿಯಾಗಿದ್ದಾರೆ ಎಂದು ಸಬ್ ಇ‌ನ್ ಸ್ಪೆಕ್ಟರ್ ರಾಜು ತಿಳಿಸಿದ್ದಾರೆ.

ಎರಡು ತಿಂಗಳ ಹಿಂದೆ ಇದೇ ಬ್ಯಾಂಕ್ ಗೋಡೆ ಕೊರೆದು ಎಟಿಎಂ ಒಡೆದು ದರೋಡೆಗೆ ಯತ್ನಿಸಲಾಗಿತ್ತು. ಆಗ ಭದ್ರತಾ ಸಿಬ್ಬಂದಿ ಇರಲಿಲ್ಲ. ಈ ಬಾರಿ ಭದ್ರತಾ ಸಿಬ್ಬಂದಿ ಇದ್ದರು.

ಅವರ ಮೇಲೆ ಹಲ್ಲೆ ಮಾಡಿ ಬ್ಯಾಂಕ್ ಗೋಡೆ ಒಡೆದು ದರೋಡೆಗೆ ಯತ್ನಿಸಲಾಗಿದೆ. ಬ್ಯಾಂಕಿನಲ್ಲಿ ಯಾವುದೇ ರೀತಿ ದೋಚಿಕೊಂಡು ಹೋಗಿಲ್ಲ ಎಂದು ಹೇಳಿದ್ದಾರೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry