ಬಿಡುಗಡೆಯಾದ ನಾಲ್ಕೇ ದಿನಕ್ಕೆ ₹110 ಕೋಟಿ ಗಳಿಸಿದ ‘ಪದ್ಮಾವತ್‌’

7

ಬಿಡುಗಡೆಯಾದ ನಾಲ್ಕೇ ದಿನಕ್ಕೆ ₹110 ಕೋಟಿ ಗಳಿಸಿದ ‘ಪದ್ಮಾವತ್‌’

Published:
Updated:
ಬಿಡುಗಡೆಯಾದ ನಾಲ್ಕೇ ದಿನಕ್ಕೆ ₹110 ಕೋಟಿ ಗಳಿಸಿದ ‘ಪದ್ಮಾವತ್‌’

ಮುಂಬೈ: ಸಂಜಯ್‌ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್’ ಚಿತ್ರ ಕಳೆದ ಗುರುವಾರ 25ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು ಉತ್ತಮ ಪ್ರದರ್ಶನ ಕಾಣುತ್ತಿದೆ.

ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸದ್ಯ ಈ ಚಿತ್ರ ಬಿಡುಗಡೆಯಾದ ನಾಲ್ಕೇ ದಿನಕ್ಕೆ ₹110 ಕೋಟಿ ಗಳಿಸಿದೆ.

ಒಂದು ದಿನ ಮುನ್ನವೇ ಬಿಡುಗಡೆಯಾದ ಚಿತ್ರ ಬುಧವಾರ ₹5 ಕೋಟಿ, ಗುರುವಾರ ₹19 ಕೋಟಿ, ಶುಕ್ರವಾರ 32 ಕೋಟಿ, ಶನಿವಾರ 27 ಕೋಟಿ ಗಳಿಸಿತ್ತು. ವಾರಾಂತ್ಯಕ್ಕೆ ₹110 ಕೋಟಿ ಗಳಿಸಿದೆ.

ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ರಾಜಸ್ಥಾನ, ಗುಜರಾತ್‌, ಮಹಾರಾಷ್ಟ್ರ ಸೇರಿದಂತೆ ಹಲವೆಡೆ ಚಿತ್ರ ಬಿಡುಗಡೆ ಮಾಡದಂತೆ ಒತ್ತಾಯಿಸಿ ಪ್ರತಿಭಟನೆಗಳು ನಡೆದಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry