ಕಕ್ಕೇರಾ: ಪಲ್ಲಕ್ಕಿಗೆ ಭವ್ಯ ಸ್ವಾಗತ

7

ಕಕ್ಕೇರಾ: ಪಲ್ಲಕ್ಕಿಗೆ ಭವ್ಯ ಸ್ವಾಗತ

Published:
Updated:

ಕಕ್ಕೇರಾ: ತಿಂಥಣಿಯ ಮೌನೇಶ್ವರ ಜಾತ್ರೆ ಅಂಗವಾಗಿ ಸುರಪುರದ ಕಾಳಿಕಾದೇವಿ ದೇವಸ್ಥಾನದಿಂದ ಬಂದ ಕಾಳಿಕಾದೇವಿ ಹಾಗೂ ಸೂಗುರೇಶ್ವರ ಮೂರ್ತಿ ಹೊತ್ತ ಪಲ್ಲಕ್ಕಿಯನ್ನು ತಿಂಥಣಿ ಗ್ರಾಮಸ್ಥರು ಭಾನುವಾರ ಸಂಭ್ರಮದಿಂದ ಬರಮಾಡಿಕೊಂಡರು.

ನಂತರ ಮೆರವಣಿಗೆ ಮೂಲಕ ದೇವಸ್ಥಾನದ ಆವರಣದವರೆಗೆ ಪಲ್ಲಕ್ಕಿಯನ್ನು ತೆಗೆದುಕೊಂಡು ಹೋಗಲಾಯಿತು.  ನಂತರ ಗಂಗಾಸ್ಥಳಕ್ಕೆ ತೆರಳಿ ರಾತ್ರಿ 11ಗಂಟೆಗೆ ದೇವಸ್ಥಾನ ಪ್ರವೇಶಿಸಿತು.

ಮೌನೇಶ್ವರ ದೇವಸ್ಥಾನ ಅರ್ಚಕ ಗಂಗಾಧರ ಮಹಾಸ್ವಾಮಿ, ತಾ.ಪಂ ಸದಸ್ಯೆ ಪಾರ್ವತಿಬಾಯಿ.ಎಂ.ಸಾಹುಕಾರ, ತಿಪ್ಪಣ್ಣ ಕುರ್ಲಿ, ಸಣ್ಣಮಾನಯ್ಯ ಸಾಹುಕಾರ, ಗಂಗಾಧರನಾಯಕ, ಮಲ್ಲಿಕಾರ್ಜುನ ಸಾಹುಕಾರ, ದೇವಿಂದ್ರಪ್ಪ ಅಂಬಿಗೇರ, ಲಿಂಗಣ್ಣ ಮುತ್ಯಾ, ವೀರಭದ್ರಸ್ವಾಮಿ, ಭೀಮಣ್ಣ ಕವಾಲ್ದಾರ, ಫಕ್ರುದ್ಧೀನ್ ಹವಾಲ್ದಾರ್, ಸಲೀಮಸಾಬ ಕಂಬಾರ ಇದ್ದರು. ಸೋಮವಾರ ಏಕಾದಶಿ ಆಚರಣೆ, ಮಹಾಪ್ರಸಾದ ಜರುಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry