2018-19ನೇ ಸಾಲಿನಲ್ಲಿ ಶೇ 7ರಿಂದ 7.5 ಜಿಡಿಪಿ ಬೆಳವಣಿಗೆ ದರ ನಿರೀಕ್ಷೆ

7

2018-19ನೇ ಸಾಲಿನಲ್ಲಿ ಶೇ 7ರಿಂದ 7.5 ಜಿಡಿಪಿ ಬೆಳವಣಿಗೆ ದರ ನಿರೀಕ್ಷೆ

Published:
Updated:
2018-19ನೇ ಸಾಲಿನಲ್ಲಿ ಶೇ 7ರಿಂದ 7.5 ಜಿಡಿಪಿ ಬೆಳವಣಿಗೆ ದರ ನಿರೀಕ್ಷೆ

ನವದೆಹಲಿ: ಪ್ರಸಕ್ತ ವಿತ್ತ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರ ಪ್ರಮಾಣ ಶೇ 6.75ರಷ್ಟಿರಲಿದ್ದು, 2018–19ನೇ ಸಾಲಿನಲ್ಲಿ ಶೇ 7ರಿಂದ 7.5ರಷ್ಟಿರಲಿದೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ.

2017–18ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸೋಮವಾರ ಸಂಸತ್ತಿನಲ್ಲಿ ಮಂಡಿಸಿದರು.

‘ಸರ್ಕಾರ ಕೈಗೊಂಡಿರುವ ಪ್ರಮುಖ ಸುಧಾರಣಾ ಕ್ರಮಗಳಿಂದಾಗಿ ಪ್ರಸಕ್ತ ಸಾಲಿನಲ್ಲಿ ಜಿಡಿಪಿ ಬೆಳವಣಿಗೆ ದರ ಶೇ 6.75 ತಲುಪಲಿದ್ದು, 2018–19ನೇ ಸಾಲಿನಲ್ಲಿ ಶೇ 7ರಿಂದ 7.5ರಷ್ಟಾಗಲಿದೆ’ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

2014–15ನೇ ಸಾಲಿನಲ್ಲಿ ಜಿಡಿಪಿ ಬೆಳವಣಿಗೆಯ ಸರಾಸರಿ ಪ್ರಮಾಣ ಶೇ 7.3ರಷ್ಟಿತ್ತು. ಇದು ವಿಶ್ವದ ಪ್ರಮುಖ ಆರ್ಥಿಕ ಸದೃಢ ರಾಷ್ಟ್ರಗಳಿಗಿಂತಲೂ ಹೆಚ್ಚು ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವುದು ಜಿಡಿಪಿ ಬೆಳವಣಿಗೆ ದರ ಹೆಚ್ಚಳಕ್ಕೆ ತೊಡಕಾಗಬಹುದಾದರೂ ಇತರ ಅನೇಕ ಅಂಶಗಳು ಜಿಡಿಪಿ ವೃದ್ಧಿಗೆ ನೆರವಾಗಲಿದೆ ಎಂಬ ಅಂಶವನ್ನೂ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry