‘ಕೊಡಗು ವೀರ ಸೇನಾನಿಗಳ ಬೀಡು’

7

‘ಕೊಡಗು ವೀರ ಸೇನಾನಿಗಳ ಬೀಡು’

Published:
Updated:

ಸೋಮವಾರಪೇಟೆ: ಭಾರತೀಯ ಸೇನಾ ಪಡೆಗಳಲ್ಲಿ ಪ್ರಥಮ ಮಹಾ ದಂಡನಾಯಕನಾಗಿ ಸೇವೆ ಸಲ್ಲಿಸಿ, ವಿಶ್ವದ ಗಮನ ಸೆಳೆದಿದ್ದ ಕಾರ್ಯಪ್ಪ ಅವರ ಜನ್ಮ ದಿನಾಚರಣೆಯನ್ನು ದೇಶದ ಎಲ್ಲೆಡೆ ಆಚರಿಸುವಂತಾಗಬೇಕು ಎಂದು ಜೈ ಜವಾನ್ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ಹೇಳಿದರು.

ಪಟ್ಟಣದ ಜೈಜವಾನ್ ಮಾಜಿ ಸೈನಿಕರ ಸಂಘದಲ್ಲಿ ಭಾನುವಾರ ನಡೆದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 119ನೇ ಜನ್ಮದಿನಾಚರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

‘ಕಾರ್ಯಪ್ಪ ಅವರ ಸಾಧನೆ ಇಂದಿಗೂ ಹಚ್ಚಹಸಿರಾಗಿ ಉಳಿದಿದೆ. ಅವರ ಶಿಸ್ತು, ಪ್ರಾಮಾಣಿಕತನ, ದೇಶಭಕ್ತಿ, ದೇಶ ಸೇವೆಗಳಿಂದ ಕೂಡಿದ ಆದರ್ಶಗುಣಗಳು ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದವು. ಅವರ ಸೇವಾ ಪ್ರೇರಣೆಯಿಂದಲೇ ಇಂದಿಗೂ ಜಿಲ್ಲೆಯ ಯುವಕರ ಹೆಚ್ಚಾಗಿ ಸೈನ್ಯಕ್ಕೆ ಸೇರುತ್ತಿದ್ದಾರೆ. ಇದರಿಂದಾಗಿ ಕೊಡಗು ವೀರ ಸೇನಾನಿಗಳ ಬೀಡು ಎಂಬ ಖ್ಯಾತಿಗೆ ಪಾತ್ರವಾಗಿದೆ’ ಎಂದರು.

ಸಂಘದ ಉಪಾಧ್ಯಕ್ಷ ನಾಗರಾಜ್, ಕಾರ್ಯದರ್ಶಿ ಬಸಪ್ಪ, ಖಜಾಂಚಿ ಸುಕುಮಾರ್, ಆಂತರಿಕ ಲೆಕ್ಕ ಪರಿಶೋಧಕ ಮಾಚಯ್ಯ, ಎಂಜಿನಿಯರ್‌ ಭಾಮಿನಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry