ಕಾಬೂಲ್‌ ಸೇನಾ ಅಕಾಡೆಮಿ ಮೇಲೆ ದಾಳಿ: ಐವರು ಸೈನಿಕರು ಬಲಿ

7

ಕಾಬೂಲ್‌ ಸೇನಾ ಅಕಾಡೆಮಿ ಮೇಲೆ ದಾಳಿ: ಐವರು ಸೈನಿಕರು ಬಲಿ

Published:
Updated:
ಕಾಬೂಲ್‌ ಸೇನಾ ಅಕಾಡೆಮಿ ಮೇಲೆ ದಾಳಿ: ಐವರು ಸೈನಿಕರು ಬಲಿ

ಕಾಬೂಲ್: ಇಲ್ಲಿನ ಸೇನಾ ಅಕಾಡೆಮಿಗೆ ಭದ್ರತೆ ಒದಗಿಸುತ್ತಿರುವ ಅಫ್ಗಾನಿಸ್ತಾನ ಸೇನೆಯ ಘಟಕವೊಂದರ ಮೇಲೆ ಸೋಮವಾರ ನಸುಕಿನಲ್ಲಿ ನುಸುಳುಕೋರರು ನಡೆಸಿದ ದಾಳಿಯಲ್ಲಿ ಐವರು ಸೈನಿಕರು ಮೃತಪಟ್ಟಿದ್ದಾರೆ. 10 ಮಂದಿ ಗಾಯಗೊಂಡಿದ್ದಾರೆ.

ನಸುಕಿನ 4 ಗಂಟೆ ವೇಳೆಗೆ ದಾಳಿ ಆರಂಭವಾಗಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಮೊದಲು ನುಸುಳುಕೋರರು ಯೋಧರ ಜತೆ ಗುಂಡಿನ ಚಕಮಕಿ ನಡೆಸಿದ್ದಾರೆ. ನಂತರ ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದೆ ಎಂದು ಅಫ್ಗಾನಿಸ್ತಾನದ ರಕ್ಷಣಾ ಸಚಿವಾಲಯದ ವಕ್ತಾರ ದೌಲತ್ ವಜೀರಿ ತಿಳಿಸಿದ್ದಾರೆ.

ಒಟ್ಟು ಐವರು ನುಸುಳುಕೋರರು ದಾಳಿ ನಡೆಸಿದ್ದಾರೆ. ಈ ಪೈಕಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಇನ್ನಿಬ್ಬರು ತಮ್ಮನ್ನು ತಾವು ಸ್ಫೋಟಿಸಿಕೊಂಡಿದ್ದಾರೆ. ಮತ್ತೊಬ್ಬ ನುಸುಳುಕೋರ ಗುಂಡಿನ ಚಕಮಕಿಯಲ್ಲಿ ಹತನಾಗಿದ್ದಾನೆ ಎಂದು ವಜೀರಿ ತಿಳಿಸಿದ್ದಾರೆ. ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.

ತಾಲಿಬಾನ್ ಭಯೋತ್ಪಾದಕ ಸಂಘಟನೆಯ ಉಗ್ರರು ಶನಿವಾರ ಕಾಬೂಲ್‌ನಲ್ಲಿ ನಡೆಸಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 103 ಜನ ಮೃತಪಟ್ಟು, 235 ಜನ ಗಾಯಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry