ಚೀನಾದಲ್ಲಿ ‘ಸಿಕ್ರೇಟ್‌ ಸೂಪರ್‌ ಸ್ಟಾರ್‌’ ಕಮಾಲ್‌: ₹420 ಕೋಟಿ ಗಳಿಕೆ

7

ಚೀನಾದಲ್ಲಿ ‘ಸಿಕ್ರೇಟ್‌ ಸೂಪರ್‌ ಸ್ಟಾರ್‌’ ಕಮಾಲ್‌: ₹420 ಕೋಟಿ ಗಳಿಕೆ

Published:
Updated:
ಚೀನಾದಲ್ಲಿ ‘ಸಿಕ್ರೇಟ್‌ ಸೂಪರ್‌ ಸ್ಟಾರ್‌’ ಕಮಾಲ್‌: ₹420 ಕೋಟಿ ಗಳಿಕೆ

ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಹಾಗೂ ನಟಿ ಝೈರಾ ವಾಸಿಂ ಅಭಿನಯದ 'ಸಿಕ್ರೇಟ್ ಸೂಪರ್ ಸ್ಟಾರ್' ಚಿತ್ರ ಚೀನಾದಲ್ಲಿ ಜ.19ರಂದು ಬಿಡುಗಡೆಯಾಗಿದ್ದು, ಉತ್ತಮ ಗಳಿಕೆ ಮಾಡಿದೆ.

ಚೀನಾದಲ್ಲಿ ಈ ಚಿತ್ರ ಬಿಡುಗಡೆಯಾದ ಮೊದಲ ದಿನವೇ ₹ 43 ಕೋಟಿ ಗಳಿಸಿ ‘ದಂಗಲ್‌’ ಚಿತ್ರದ ದಾಖಲೆಯನ್ನು ಮುರಿದಿದ್ದು ಸುದ್ದಿಯಾಗಿತ್ತು. 

ಸದ್ಯ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಇವರೆಗೂ ₹420 ಕೋಟಿ ಗಳಿಸಿದೆ. ಕೆಲವೇ ದಿನಗಳಲ್ಲಿ ₹500 ಕೋಟಿ ಗಳಿಸಲಿದೆ ಎಂದು ಹೇಳಲಾಗಿದೆ.

ನಟ, ನಿರ್ಮಾಪಕ ಅಮೀರ್ ಖಾನ್, ಈ ಚಿತ್ರಕ್ಕೆ ಹಣ ಹೂಡಿಕೆ ಮಾಡಿದ್ದಾರೆ. ಅಮೀರ್ ಅಭಿನಯದ ಈ ಹಿಂದಿನ ಚಿತ್ರಗಳಾದ 'ದಂಗಲ್' ಹಾಗೂ 'ಪಿಕೆ'  ಭಾರತ, ಚೀನಾ ಸೇರಿದಂತೆ ವಿಶ್ವದಾದ್ಯಂತ ಬಿಡುಗಡೆಯಾಗಿ ಉತ್ತಮ ಗಳಿಕೆ ಮಾಡಿ ದಾಖಲೆ ನಿರ್ಮಿಸಿದ್ದವು.

ವಿಶ್ವದಾದ್ಯಂತ ತೆರೆ ಕಂಡಿದ್ದ ದಂಗಲ್ ₹2,000 ಕೋಟಿ ಗಳಿಸಿತ್ತು. ಆದರಲ್ಲಿ ಚೀನಾ ಒಂದರಲ್ಲೇ ₹1,459 ಕೋಟಿ ಗಳಿಸಿದ್ದು ವಿಶೇಷ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry