ಪ್ರಿಯಾಂಕಾ ಸ್ಟ್ರೀಟ್‌ ಸ್ಟೈಲ್‌

7

ಪ್ರಿಯಾಂಕಾ ಸ್ಟ್ರೀಟ್‌ ಸ್ಟೈಲ್‌

Published:
Updated:
ಪ್ರಿಯಾಂಕಾ ಸ್ಟ್ರೀಟ್‌ ಸ್ಟೈಲ್‌

ಕಣ್ಣಿಗೆ ಕಪ್ಪು ಕನ್ನಡಕ, ಅಡ್ಡಲಾಗಿ ಬಾಚಿದ ಕೇಶರಾಶಿ ಭುಜವನ್ನಾಲಂಗಿಸಿತ್ತು. ಟರ್ಟಲ್‌ ನೆಕ್‌ ಶರ್ಟ್‌ಗೆ ಕಪ್ಪು ಜಾಕೆಟ್‌ನ ಮೆರುಗು. ಅಲ್ಲಲ್ಲಿ ಹರಿದ ಜೀನ್ಸ್‌ ಸ್ಕರ್ಟ್‌ ಅಲ್ಲಲ್ಲ, ಸ್ಕರ್ಟ್‌ನಂತೆ ಕಾಣುವ ಪ್ಯಾಂಟ್‌ ತೊಟ್ಟು, ಕೈಯಲ್ಲೊಂದು ಕಾಫಿಮಗ್‌ ಹಿಡಿದು ಪ್ರಿಯಾಂಕಾ ಚೋಪ್ರಾ ನ್ಯೂಯಾರ್ಕ್‌ನ ರಸ್ತೆಯ ಮೇಲೆ ಹೆಜ್ಜೆ ಇಡುತ್ತಿದ್ದಂತೆ ಕ್ಯಾಮೆರಾ ಕಣ್ಣುಗಳು ಫಳಫಳ ಹೊಳೆದವು.

ಪ್ರತಿ ಬಾರಿಯೂ ತಮ್ಮ ವಿಶಿಷ್ಟ ದಿರಿಸಿನ ಮೂಲಕ ‘ಸ್ಟ್ರೀಟ್‌ ಸ್ಟೈಲ್‌’ ಪರಂಪರೆಗೆ ಹೊಸತನ ತುಂಬುವ ಪ್ರಿಯಾಂಕಾ ಈ ಬಾರಿಯೂ ಆಕರ್ಷಿಸಿದ್ದು ಅವರ ಫ್ಯಾಷನ್‌ ಪ್ರಜ್ಞೆಯಿಂದ. ಸೆಲೆಬ್ರಿಟಿ ಸ್ಟೈಲಿಸ್ಟ್‌ ಆಗಿರುವ ಕ್ರಿಸ್ಟಿನಾ ಎಹ್ರಲಿಚ್‌ ವಿಭಿನ್ನ ಸಂಯೋಜನೆಯ ದಿರಿಸನ್ನು ಪ್ರಿಯಾಂಕಾಗೆ ಆರಿಸಿಕೊಟ್ಟಿದ್ದರು.

ಫ್ಲೋರ್‌ ದುಮಾಲ್‌ ವಿನ್ಯಾಸದ ಟರ್ಟಲ್‌ ನೆಕ್‌ ಶರ್ಟ್‌ ಹಾಗೂ ಅಲೆಕ್ಸಾಂಡರ್‌ ಮೆಕ್ವೀನ್‌ ವಿನ್ಯಾಸದ ಲೆದರ್‌ ಜಾಕೆಟ್‌ ಹಾಗೂ ಮಣಿಕಟ್ಟಿನವರೆಗೆ ಚಾಚಿದ್ದ ಕೆಂಪು ಬೂಟ್‌ ಪ್ರಿಯಾಂಕಾ ಜನಮೆಚ್ಚುಗೆ ಗಳಿಸಲು ಕಾರಣವಾಯ್ತು. ಇನ್‌ಸ್ಟಾಗ್ರಾಂನಲ್ಲಿ ಪ್ರಿಯಾಂಕಾ ಹಂಚಿಕೊಂಡಿದ್ದ ಈ ಚಿತ್ರಕ್ಕೆ ಹತ್ತು ಲಕ್ಷಕ್ಕೂ ಹೆಚ್ಚು ಜನರು ಮೆಚ್ಚುಗೆ ಸೂಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry