ತನಿಖೆ ಎದುರಿಸಿದ ಫೋಕ್ಸ್‌ವ್ಯಾಗನ್

7

ತನಿಖೆ ಎದುರಿಸಿದ ಫೋಕ್ಸ್‌ವ್ಯಾಗನ್

Published:
Updated:
ತನಿಖೆ ಎದುರಿಸಿದ ಫೋಕ್ಸ್‌ವ್ಯಾಗನ್

ಫ್ರಾಂಕ್‌ಫರ್ಟ್ : ಕಾರುಗಳ ವಾಯುಮಾಲಿನ್ಯ ತಪಾಸಣೆಯಲ್ಲಿ ಮನುಷ್ಯ ಹಾಗೂ ಮಂಗಗಳನ್ನು ಬಳಸುವ ಪ್ರಯೋಗಗಳಿಗೆ ಅನುದಾನ ನೀಡಿದ ಆರೋಪಕ್ಕೆ ಸಂಬಂಧಿಸಿ, ಪ್ರಮುಖ ಕಾರು ತಯಾರಿಕಾ ಕಂಪನಿ ಫೋಕ್ಸ್‌ವ್ಯಾಗನ್ ಸೋಮವಾರ ತನಿಖೆ ಎದುರಿಸಿದೆ.

ಜರ್ಮನಿಯ ವಾಹನ ತಯಾರಿಕಾ ಸಂಸ್ಥೆಗಳಿಂದ ನಿಯೋಜಿಸಲಾದ ಅಮೆರಿಕದ ಸಂಸ್ಥೆಯೊಂದು 2014ರಲ್ಲಿ 10 ಮಂಗಗಳನ್ನು ವಾಯುಮಾಲಿನ್ಯ ತಪಾಸಣೆಗೆ ಬಳಸಿತ್ತು ಎಂದು ‘ನ್ಯೂಯಾರ್ಕ್ ಟೈಮ್ಸ್’  ಶುಕ್ರವಾರ ವರದಿ ಮಾಡಿತ್ತು. 25 ಆರೋಗ್ಯವಂತ ಮನುಷ್ಯರಿಗೆ ವಿಷಕಾರಿ ಸಾರಜನಕ ಆಕ್ಸೈಡನ್ನು ಸೇವಿಸುವಂತೆ ಮಾಡಲಾಗಿತ್ತು ಎಂದೂ ವರದಿಯಲ್ಲಿ ಹೇಳಲಾಗಿದೆ.

ವರದಿಗೆ ಸಂಬಂಧಿಸಿ, ‘ನಾವು ಯಾವುದೇ ಸ್ವರೂಪದಲ್ಲಿ ಪ್ರಾಣಿ ಹಿಂಸೆ ನಡೆಸಿಲ್ಲ’ ಎಂದು ಫೋಕ್ಸ್‌ವ್ಯಾಗನ್ ಶನಿವಾರ ಹೇಳಿಕೆ ಪ್ರಕಟಿಸಿತ್ತು. ಡೈಮ್ಲರ್ ಮತ್ತು ಬಿಎಂಡಬ್ಲ್ಯು ಸಂಸ್ಥೆಗಳೂ ತಾವು ಈ ಪ್ರಯೋಗದಿಂದ ಅಂತರ ಕಾಯ್ದುಕೊಂಡಿರುವುದಾಗಿ ಹೇಳಿವೆ.

ಸಾರಜನಕ ಆಕ್ಸೈಡ್ ಸೇವನೆಯಿಂದಾಗಿ ಆಸ್ತಮಾ ಹಾಗೂ ಶ್ವಾಸಕೋಶದ ಉರಿಯೂತ ಉಂಟಾಗುತ್ತದೆ.

ತನ್ನ ಕಾರುಗಳ ವಾಯುಮಾಲಿನ್ಯ ತಪಾಸಣೆಗೆ ಸಂಬಂಧಿಸಿ ಫೋಕ್ಸ್‌ವ್ಯಾಗನ್ ವಂಚನೆ ಮಾಡಿದೆ ಎಂಬ ಆರೋಪ 2015ರಲ್ಲಿ ಕೇಳಿಬಂದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry