ಭಾರತ ಸಂಜಾತರಿಗೆ ಅಮೆರಿಕ ಗೌರವ

7

ಭಾರತ ಸಂಜಾತರಿಗೆ ಅಮೆರಿಕ ಗೌರವ

Published:
Updated:
ಭಾರತ ಸಂಜಾತರಿಗೆ ಅಮೆರಿಕ ಗೌರವ

ವಾಷಿಂಗ್ಟನ್ : ಪ್ರತಿಷ್ಠಿತ ‘ನ್ಯಾಷನಲ್ ಇನ್ವೆಂಟರ್ಸ್ ಹಾಲ್ ಆಫ್ ಫೇಮ್’ನ ಈ ವರ್ಷದ ಆವೃತ್ತಿಗೆ ಭಾರತ ಸಂಜಾತ ಇಬ್ಬರು ಅಮೆರಿಕನ್ನರು ಸೇರ್ಪಡೆಗೊಂಡಿದ್ದಾರೆ.

ಎಂಐಎಂಒ (ಮಲ್ಟಿಪಲ್ ಇನ್‌ಪುಟ್ ಮಲ್ಟಿಪಲ್ ಔಟ್‌ಪುಟ್– ರೇಡಿಯೊ ಸಂವಹನ ಸಾಮರ್ಥ್ಯವನ್ನು ವೃದ್ಧಿಸುವುದು) ನಿಸ್ತಂತು ತಂತ್ರಜ್ಞಾನದಲ್ಲಿನ ಅನ್ವೇಷಣೆಗೆ ಆರೋಗ್ಯಸ್ವಾಮಿ ಪೌಲ್‌ರಾಜ್, ವಸಡು ಮತ್ತು ಹಲ್ಲಿನ ಚಿಕಿತ್ಸೆಯಲ್ಲಿ ಬಳಸುವ ಪರ್ಯಾಯ ನ್ಯಾನೊ ಸಾಧನಗಳ ಕುರಿತು ಸಂಶೋಧನೆ ನಡೆಸಿದ ಸುಮಿತಾ ಮಿತ್ರ ಸೇರ್ಪಡೆಗೊಂಡವರು.

4ಜಿ ಮೊಬೈಲ್ ಹಾಗೂ ವೈ–ಫೈಗಳಲ್ಲಿ ದತ್ತಾಂಶ ಪ್ರಸರಣಕ್ಕೆ ಎಂಐಎಂಒ ಬಳಕೆಯಾಗುತ್ತದೆ. ನಿಸ್ತಂತು ಅಂತರ್ಜಾಲ ಸಂಪರ್ಕದ ಪ್ರಮುಖ ವಾಹಕವಾಗಿ ಅದು ಕೆಲಸ ಮಾಡುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry