ಎರಡನೇ ಸ್ಥಾನದಲ್ಲಿ ಫೆಡರರ್‌

7

ಎರಡನೇ ಸ್ಥಾನದಲ್ಲಿ ಫೆಡರರ್‌

Published:
Updated:
ಎರಡನೇ ಸ್ಥಾನದಲ್ಲಿ ಫೆಡರರ್‌

ಪ್ಯಾರಿಸ್‌ : ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಸ್ವಿಟ್ಜರ್‌ಲೆಂಡ್‌ನ  ಆಟಗಾರ ರೋಜರ್ ಫೆಡರರ್‌ ಎಟಿಪಿ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿದ್ದಾರೆ.

ಮೊದಲ ಸ್ಥಾನದಲ್ಲಿದ್ದ ರಫೆಲ್ ನಡಾಲ್ ಹಾಗೂ ಫೆಡರರ್‌ ಅವರ ನಡುವಿನ ಪಾಯಿಂಟ್ಸ್ ಅಂತರ ತಗ್ಗಿದೆ. 9,760 ಪಾಯಿಂಟ್ಸ್‌ಗಳಿಂದ ನಡಾಲ್ ವಿಶ್ವದ ಅಗ್ರಮಾನ್ಯ ಆಟಗಾರ ಎನಿಸಿದ್ದಾರೆ. ಫೆಡರರ್‌ ಬಳಿ ಈಗ 9,605 ಪಾಯಿಂಟ್ಸ್‌ ಇವೆ. ಇಬ್ಬರ ನಡುವಿನ ಪಾಯಿಂಟ್ಸ್‌ ಅಂತರ 155ಕ್ಕೆ ಇಳಿದಿದೆ.

ಮೆಲ್ಬರ್ನ್‌ನಲ್ಲಿ ನಡೆದ ಟೂರ್ನಿಯಲ್ಲಿ ನಡಾಲ್ ಕ್ವಾರ್ಟರ್‌ಫೈನಲ್‌ನಲ್ಲಿ ಸೋತಿದ್ದರು. ಫೈನಲ್‌ನಲ್ಲಿ ಫೆಡರರ್‌ ಕ್ರೊವೇಷ್ಯಾದ ಸಿಲಿಕ್‌ಗೆ ಸೋಲುಣಿಸಿ ಪ್ರಶಸ್ತಿ ಗೆದ್ದರು. ಸಿಲಿಕ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಮೂರನೇ ರ‍್ಯಾಂಕಿಂಗ್ ಸ್ಥಾನಕ್ಕೆ ಏರಿದ ಸಾಧನೆ ಮಾಡಿದ್ದಾರೆ.

ಈ ಬಾರಿಯ ಟೂರ್ನಿಯ ಆಕರ್ಷಣೆ ಎನಿಸಿದ್ದ ಯುವ ಆಟಗಾರ ಚುಂಗ್ ಹೆಯಾನ್‌ 29 ಸ್ಥಾನಗಳಲ್ಲಿ ಒಮ್ಮೆಲೆ ಏರಿಕೆ ಕಂಡು 29ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry