ಫೆ.1ರಿಂದ ಸಿಸಿಐ ಓಪನ್ ಸ್ನೂಕರ್‌

7

ಫೆ.1ರಿಂದ ಸಿಸಿಐ ಓಪನ್ ಸ್ನೂಕರ್‌

Published:
Updated:

ಮುಂಬೈ: ಪಂಕಜ್ ಅಡ್ವಾಣಿ ಹಾಗೂ ಆದಿತ್ಯಾ ಮೆಹ್ತಾ ಅವರು ಫೆಬ್ರುವರಿ 1ರಿಂದ ಇಲ್ಲಿ ನಡೆಯುವ ಸಿಸಿಐ ಓಪನ್ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ಕರ್ನಾಟಕದ ಪಂಕಜ್ ಅಡ್ವಾಣಿ ಇಲ್ಲಿ ಪಾಲ್ಗೊಳ್ಳುವುದನ್ನು ಖಚಿತ ಪಡಿಸಿದ್ದಾರೆ.

‘ದಿ ಕ್ಲಾಷ್‌ ಆಫ್‌ ಟೈಟನ್ಸ್‌’ ವತಿಯಿಂದ ₹ 12.5 ಲಕ್ಷ ಬಹುಮಾನ ಮೊತ್ತವನ್ನು ಈ ಟೂರ್ನಿ ಒಳಗೊಂಡಿದೆ. ಸಿಸಿಐನ ವಿಲ್ಸನ್‌ ಜೋನ್ಸ್‌ ಬಿಲಿಯರ್ಡ್ಸ್‌ ಸಂಕೀರ್ಣದಲ್ಲಿ ಪಂದ್ಯ ನಡೆಯಲಿದೆ.

ಈ ವರ್ಷ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ಚಂಡೀಗಡದ ಸುಮಿತ್ ತಲ್ವಾರ್‌ ಮತ್ತು ರನ್ನರ್ ಅಪ್‌ ರೈಲ್ವೇಸ್ ತಂಡದ ಮಲ್ಕೀತ್ ಸಿಂಗ್‌ ಆಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry