ಹೈ-ಕ ರಣಜಿ ತಂಡ ರಚನೆಗೆ ಅಜರುದ್ದೀನ್‌ ಸಲಹೆ

7

ಹೈ-ಕ ರಣಜಿ ತಂಡ ರಚನೆಗೆ ಅಜರುದ್ದೀನ್‌ ಸಲಹೆ

Published:
Updated:
ಹೈ-ಕ ರಣಜಿ ತಂಡ ರಚನೆಗೆ ಅಜರುದ್ದೀನ್‌ ಸಲಹೆ

ಕಲಬುರ್ಗಿ: 'ಮಹಾರಾಷ್ಟ್ರದಲ್ಲಿ ವಿದರ್ಭ, ಗುಜರಾತ್‌ನಲ್ಲಿ ಸೌರಾಷ್ಟ್ರ ಮತ್ತು ಬರೋಡ ತಂಡಗಳು ಇರುವಂತೆ ರಾಜ್ಯದಲ್ಲಿ ಹೈದರಾಬಾದ್

ಕರ್ನಾಟಕ ರಣಜಿ ತಂಡ ರಚಿಸಬಹುದಾಗಿದೆ' ಎಂದು ಹಿರಿಯ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಸಲಹೆ ನೀಡಿದರು.

'ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಅವರು ‘ಹೊಸ ತಂಡ ರಚಿಸಲು ಅನುವು ಮಾಡುವಂತೆ ಬಿಸಿಸಿಐಗೆ ರಾಜ್ಯ ಕ್ರಿಕೆಟ್ ಸಂಸ್ಥೆ ಪ್ರಸ್ತಾಪ ಸಲ್ಲಿಸಬಹುದು’ ಎಂದರು.

‘ಐಪಿಎಲ್‌ನಲ್ಲಿ ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ (ಯುಡಿಆರ್‌ಎಸ್‌) ಜಾರಿಗೆ ತರುತ್ತಿರುವುದು ಒಳ್ಳೆಯ ನಿರ್ಧಾರ’ ಎಂದು ಹೇಳಿದ ಅವರು ‘ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಕ್ಕಾಗಿ ಭಾರತ ತಂಡದ ಆಯ್ಕೆ ಸೂಕ್ತವಾಗಿರಲಿಲ್ಲ. ಎರಡು ಪಂದ್ಯಗಳಲ್ಲಿ ಅಜಿಂಕ್ಯ ರಹಾನೆಗೆ ಅವಕಾಶ ನೀಡಿದ್ದರೆ ಫಲಿತಾಂಶವೇ ಬೇರೆಯಾಗಿರುತ್ತಿತ್ತು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry