ಪೃಥ್ವಿಗೆ ಜಯ

7

ಪೃಥ್ವಿಗೆ ಜಯ

Published:
Updated:

ಬೆಂಗಳೂರು: ಅಗ್ರ ಶ್ರೇಯಾಂಕದ ಪೃಥ್ವಿ ಶೇಖರ್ ಹಾಗೂ ಸೋಹಾ ಸೋಮವಾರ ಇಲ್ಲಿ ಆರಂಭವಾದ ಕೆಟಿಪಿಪಿಎ ವತಿಯ ಎಂ.ಪಿ ಪ್ರಕಾಶ್ ಸ್ಮಾರಕ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಟೆಂಪೆಲ್‌ ಟೆನಿಸ್ ಕೋರ್ಟ್‌ನಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಪೃಥ್ವಿ 6–3, 6–0ರಲ್ಲಿ ಎಲ್‌.ಆರ್ ಬಾಲಾಜಿ ಅವರನ್ನು ಮಣಿಸಿದರು.

ಇತರ ಪಂದ್ಯಗಳಲ್ಲಿ ಸಾಯಿ ಶರಣ್‌ ರೆಡ್ಡಿ 6–2, 7–6ರಲ್ಲಿ ಹರ್ಷಿತ್‌ ಶಂಕರ್ ಮೇಲೂ, ಬಿ.ಆರ್.ನಿಕ್ಷೇಪ್‌ 6–1, 6–2ರಲ್ಲಿ ಶಹಾಲ್ ವಿರುದ್ಧವೂ, ಸತ್ಯ ಮಾರನ್‌ 6–1, 6–1ರಲ್ಲಿ ಆರ್ಯನ್ ಪತರಂಗೆ ಮೇಲೂ, ನೈತ್ರವ್ ಶ್ರೀನಿವಾಸ್‌ 6–1, 6–1ರಲ್ಲಿ ಎಮ್‌.ಎಸ್.ಕಾರ್ತಿಕ್ ವಿರುದ್ಧವೂ ಗೆದ್ದರು.

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸೋಹಾ 6–1, 6–4ರಲ್ಲಿ ಪ್ರಗತಿ ಪ್ರಸಾದ್ ಮೇಲೂ, ಲಕ್ಷ್ಮಿ ಸಹಿತಿ 6–2, 6–1ರಲ್ಲಿ ಸಾಯಿ ಲೌಕ್ಯಾ ವಿರುದ್ಧವೂ, ದೀಪ್ಸಿಕಾ 6–4, 6–3ರಲ್ಲಿ ಲಕ್ಷನ್ಯಾ ಮೇಲೂ, ದೀಕ್ಷಾ 6–0, 6–3ರಲ್ಲಿ ನಿಕಿತಾ ಪಿಂಟೊ ಎದುರೂ ಗೆದ್ದರು. ‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry