ಮಾರುತಿ: ₹ 4,000 ಕೋಟಿ ಹೂಡಿಕೆ

7

ಮಾರುತಿ: ₹ 4,000 ಕೋಟಿ ಹೂಡಿಕೆ

Published:
Updated:

ನವದೆಹಲಿ: ಕಾರು ತಯಾರಿಕೆಯಲ್ಲಿ ದೇಶದ ಅತಿದೊಡ್ಡ ಕಂಪನಿ ಆಗಿರುವ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ), ಮುಂದಿನ ಹಣಕಾಸು ವರ್ಷದಲ್ಲಿ ₹ 4,000 ಕೋಟಿ ಹೂಡಿಕೆ ಮಾಡಲು ನಿರ್ಧರಿಸಿದೆ.

‘ಹೊಸ ಮಾದರಿಗಳ ಅಭಿವೃದ್ಧಿ, ತಯಾರಿಕಾ ಘಟಕಗಳ ನಿರ್ವಹಣೆಗೆ ಈ ಮೊತ್ತ ಬಳಸಿಕೊಳ್ಳಲಾಗುವುದು’ ಎಂದು ವ್ಯವಸ್ಥಾಪಕ ನಿರ್ದೇಶಕ ಕೆನೆಚಿ ಅಯುಕವಾ ಅವರು ತಿಳಿಸಿದ್ದಾರೆ.

‘2020ರ ಒಳಗಾಗಿ ಮಾರಾಟ ಮತ್ತು ಸೇವಾ ಕೇಂದ್ರಗಳ ಸಂಖ್ಯೆಯನ್ನು 2,098 ರಿಂದ 5,000ಕ್ಕೆ ಹೆಚ್ಚಿಸಲಾಗುವುದು. ಈಗಿರುವ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗತ್ತಿದೆ’  ಎಂದು ಹೇಳಿದ್ದಾರೆ.

12 ರಿಂದ 18 ತಿಂಗಳಲ್ಲಿ ಹೊಸ ತಲೆಮಾರಿನ ಸ್ವಿಫ್ಟ್‌ ಒಳಗೊಂಡು ಒಟ್ಟಾರೆ ನಾಲ್ಕು ಹೊಸ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನೂ ಕಂಪನಿ ಹಮ್ಮಿಕೊಂಡಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry