ಜಿಎಸ್‌ಟಿ: ಸರಕು ಸಾಗಣೆ ವಲಯದಲ್ಲಿ ಅಗಾಧ ಬದಲಾವಣೆ ನಿರೀಕ್ಷೆ

7

ಜಿಎಸ್‌ಟಿ: ಸರಕು ಸಾಗಣೆ ವಲಯದಲ್ಲಿ ಅಗಾಧ ಬದಲಾವಣೆ ನಿರೀಕ್ಷೆ

Published:
Updated:
ಜಿಎಸ್‌ಟಿ: ಸರಕು ಸಾಗಣೆ ವಲಯದಲ್ಲಿ ಅಗಾಧ ಬದಲಾವಣೆ ನಿರೀಕ್ಷೆ

ನವದೆಹಲಿ(ಪಿಟಿಐ): ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಿಂದಾಗಿ ದೇಶದ ಸರಕು ಸಾಗಣೆ ಮಾರುಕಟ್ಟೆ ಎರಡು ವರ್ಷಗಳಲ್ಲಿ ಶೇ 10.5ರಷ್ಟು ಪ್ರಗತಿ ಕಾಣುವ ನಿರೀಕ್ಷೆ ಇದೆ ಎಂದು ಆರ್ಥಿಕ ಸಮೀಕ್ಷೆ ಅಂದಾಜಿಸಿದೆ.

2020ರ ವೇಳೆಗೆ ಸರಕು ಸಾಗಣೆ ವಲಯದ ಒಟ್ಟಾರೆ ವಹಿವಾಟು ಸದ್ಯದ ₹10.24 ಲಕ್ಷ ಕೋಟಿಯಿಂದ ₹13.76 ಲಕ್ಷ ಕೋಟಿಗೆ ತಲುಪುವ ಸಾಧ್ಯತೆ ಇದೆ ಎಂದು ಸೋಮವಾರ ಸಂಸತ್‌ನಲ್ಲಿ ಮಂಡಿಸಲಾದ ‘ಆರ್ಥಿಕ ಸಮೀಕ್ಷೆ 2017–18’ ಹೇಳಿದೆ.

ಈ ಉದ್ಯಮದ ಮಹತ್ವ ಮನಗಂಡ ಸರ್ಕಾರ ಸರಕು ಸಾಗಣೆ ಕ್ಷೇತ್ರವನ್ನು ಆದ್ಯತಾ ಪಟ್ಟಿಯ ಮೂಲಸೌಕರ್ಯ ಉಪವಿಭಾಗಕ್ಕೆ ಸೇರಿಸಿದೆ. ಇದು ಈ ಕ್ಷೇತ್ರದ ಸರ್ವಾಂಗೀಣ ಬೆಳವಣಿಗೆಗೆ ನಾಂದಿ ಹಾಡಲಿದೆ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.

ಕ್ರಾಂತಿಕಾರಕ ಬದಲಾವಣೆ ಏನು?

l ಆದ್ಯತಾ ವಲಯದ ಪಟ್ಟಿಗೆ ಸೇರ್ಪಡೆಯಿಂದ ಸರಕು ಸಾಗಣೆ ಮಾರುಕಟ್ಟೆಗೆ ನಗದು ಹರಿವು ಪ್ರಮಾಣ ಏರಿಕೆ

l ಹೆಚ್ಚಿನ ಅವಧಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ

l ಹೊಸ ಯೋಜನೆಗಳಿಗೆ ಹರಿದು ಬರಲಿರುವ ಬಂಡವಾಳ

l ಲಾಜಿಸ್ಟಿಕ್‌ ಪಾರ್ಕ್‌ ನಿರ್ಮಾಣ ಯೋಜನೆಗಳಿಗೆ ಸುಲಭವಾಗಿ ಒಪ್ಪಿಗೆ

l ಸಾರಿಗೆ ಮೂಲಸೌಕರ್ಯ ಮತ್ತು ಸಂಗ್ರಹಣಾ ಸಾಮರ್ಥ್ಯ ಹೆಚ್ಚಳ

l ಹೊಸ ನಿಯಂತ್ರಣ ಕ್ರಮಗಳಿಂದ ಈ ವಲಯದಲ್ಲಿ ಹೆಚ್ಚಲಿರುವ ಶಿಸ್ತು

l ಹೆಚ್ಚಲಿರುವ ಸರಕು ಸಾಗಣೆ ಮಾರುಕಟ್ಟೆಯ ವ್ಯಾಪ್ತಿ ಮತ್ತು ಉತ್ತರದಾಯಿತ್ವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry