‘ಬ್ಯಾಡ್ಮಿಂಟನ್‌ಗೆ ಉತ್ತಮ ಭವಿಷ್ಯವಿದೆ’

7

‘ಬ್ಯಾಡ್ಮಿಂಟನ್‌ಗೆ ಉತ್ತಮ ಭವಿಷ್ಯವಿದೆ’

Published:
Updated:
‘ಬ್ಯಾಡ್ಮಿಂಟನ್‌ಗೆ ಉತ್ತಮ ಭವಿಷ್ಯವಿದೆ’

ನವದೆಹಲಿ : ಪೂರಕ ಸೌಲಭ್ಯ ಗಳನ್ನು ಒದಗಿಸಿದರೆ ಬ್ಯಾಡ್ಮಿಂಟನ್‌ ನಲ್ಲಿ ಭಾರತ ದೊಡ್ಡ ಶಕ್ತಿಯಾಗಿ ಹೊರ ಹೊಮ್ಮಲಿದೆ’ ಎಂದು ಹಿರಿಯ ಆಟಗಾರ ಪ್ರಕಾಶ್ ಪಡುಕೋಣೆ ಅಭಿಪ್ರಾಯಪಟ್ಟರು.

ಭಾರತ ಬ್ಯಾಡ್ಮಿಂಟನ್ ಸಂಸ್ಥೆಯ ಜೀವಮಾನ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಆಗದು ಎಂದು ಸುಮ್ಮನೆ ಕುಳಿತರೆ ಫಲಿತಾಂಶ ಬರುವುದಿಲ್ಲ. ದೇಶದಲ್ಲಿ ಈ ಕ್ರೀಡೆಯ ಬೆಳವಣಿಗೆಗೆ ಸಾಕಷ್ಟು ಅವಕಾಶವಿದೆ. ಭಾರತ ಬ್ಯಾಡ್ಮಿಂಟನ್ ಸಂಸ್ಥೆ ಮತ್ತು ರಾಜ್ಯ ಸಂಸ್ಥೆಗಳು ಸೂಕ್ತ ಕಾರ್ಯಯೋಜನೆಗಳನ್ನು ಹಮ್ಮಿಕೊಂಡರೆ ನಮ್ಮ ಕ್ರೀಡಾಪಟುಗಳಿಂದ ಇನ್ನಷ್ಟು ಉತ್ತಮ ಸಾಧನೆ ಮೂಡಿ ಬರಲಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry