ಸೆಮಿಫೈನಲ್‌ ‍ಪ್ರವೇಶಿಸಿದ ಸುಮಿತ್‌

7

ಸೆಮಿಫೈನಲ್‌ ‍ಪ್ರವೇಶಿಸಿದ ಸುಮಿತ್‌

Published:
Updated:

ನವದೆಹಲಿ : ಭಾರತದ ಸುಮಿತ್ ಸಾಂಗ್ವನ್‌ ಹಾಗೂ ಸರ್ಜು ಬಾಲಾ ದೇವಿ ಸೇರಿದಂತೆ ನಾಲ್ವರು ಸ್ಪರ್ಧಿಗಳು ಇಂಡಿಯಾ ಓಪನ್ ಬಾಕ್ಸಿಂಗ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ್ದಾರೆ.

ಸೋಮವಾರ ನಡೆದ ಪುರುಷರ 91ಕೆ.ಜಿ ವಿಭಾಗದಲ್ಲಿ ಸುಮಿತ್‌ 5–0ರಲ್ಲಿ ವಿಜೇಂದ್ರ ಕುಮಾರ್ ಅವ ರನ್ನು ಮಣಿಸಿದರು. ಶಿವಥಾಪ 60 ಕೆ.ಜಿ ವಿಭಾಗದ ಆರಂಭಿಕ ಸುತ್ತಿನಲ್ಲಿ ಭೂತಾನ್‌ನ ದೊರ್ಜಿ ವಾಂಗ್ಡಿ ವಿರುದ್ಧ ಗೆದ್ದರು. ನಮನ್ ತನ್ವಾರ್‌ 91ಕೆ.ಜಿ ಹೆವಿವೇಟ್‌ನಲ್ಲಿ ಕಂಚು ಜಯಿಸಿದರು. ಮನೀಷ್ ಕೌಶಿಕ್‌ 60ಕೆ.ಜಿ ವಿಭಾಗದಲ್ಲಿ ಕ್ಯೂಬಾದ ರಾಬಿ ಅರ್ಮಾಂಡೊ ಮಾರ್ಟಿನ್ಜ್‌ ವಿರುದ್ಧ ವಿಜಯಿಯಾದರು.

ಮಹಿಳೆಯರ 51ಕೆ.ಜಿ ವಿಭಾಗದಲ್ಲಿ ಸರ್ಜುಬಾಲಾ 5–0ರಲ್ಲಿ ಕೆನ್ಯಾದ ಕ್ರಿಸ್ಟೈನ್‌ ಆಂಗರೆ ಮೇಲೆ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry