ಬರಿಗೈಲಿ ಮರಳಿದ ಜೆಡಿಎಸ್‌ ಬಂಡಾಯ ಶಾಸಕರು

7
ಮುಖ್ಯಮಂತ್ರಿ ಭೇಟಿಗೆ ಸಿಗದ ಅವಕಾಶ

ಬರಿಗೈಲಿ ಮರಳಿದ ಜೆಡಿಎಸ್‌ ಬಂಡಾಯ ಶಾಸಕರು

Published:
Updated:

ಬೆಂಗಳೂರು: ತಾವು ಪ್ರತಿನಿಧಿಸಿರುವ ಕ್ಷೇತ್ರಗಳಿಂದಲೇ ಕಾಂಗ್ರೆಸ್‌ ಟಿಕೆಟ್‌ ಪಡೆಯಲು ಪ್ರಯತ್ನಿಸುತ್ತಿರುವ  ಜೆಡಿಎಸ್‌ ಬಂಡುಕೋರ ಶಾಸಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲು ಸೋಮವಾರ ವಿಫಲರಾದರು.

ಬಜೆಟ್‌ ಪೂರ್ವಭಾವಿ ಸಭೆ ನಡೆಯುತ್ತಿದ್ದ ಶಕ್ತಿಭವನಕ್ಕೆ ಸೋಮವಾರ ಬೆಳಿಗ್ಗೆ ಬಂದ ಜಮೀರ್‌ ಅಹ್ಮದ್‌, ಎನ್‌. ಚೆಲುವರಾಯಸ್ವಾಮಿ, ಅಖಂಡ ಶ್ರೀನಿವಾಸ ಮೂರ್ತಿ, ರಮೇಶ್ ಬಂಡಿ ಸಿದ್ದೇಗೌಡ ಮತ್ತು ಪುಟ್ಟಣ್ಣ ಮುಂದಿನ ಚುನಾವಣೆ ಟಿಕೆಟ್‌ ಕುರಿತಂತೆ ಸಿ.ಎಂ ಜೊತೆ ಚರ್ಚಿಸಲು ತೀರ್ಮಾನಿಸಿದ್ದರು.

ಪುಟ್ಟಣ್ಣಗೆ ಒತ್ತಡ?: ಚನ್ನಪಟ್ಟಣ ಅಥವಾ ರಾಮನಗರದಲ್ಲಿ ಸ್ಪರ್ಧಿಸುವಂತೆ ಜಮೀರ್ ಅಹಮ್ಮದ್ ಮೂಲಕ ಪುಟ್ಟಣ್ಣಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

ಆದರೆ, ಈ ಎರಡೂ ಕ್ಷೇತ್ರಗಳಲ್ಲಿ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ. ಅದರ ಬದಲು ಬೇರೆ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಪುಟ್ಟಣ್ಣ

ಪಟ್ಟು ಹಿಡಿದಿದ್ದಾರೆ.

ಈ ವಿಷಯವಾಗಿ ಚರ್ಚಿಸಲು ಪುಟ್ಟಣ್ಣ ಬಂದಿದ್ದರು ಎಂದೂ ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry