ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷ್ಕೃತ ಮಹಾಯೋಜನೆ 1,074 ಸಲಹೆ: ‘ಜನಾಗ್ರಹ’

Last Updated 29 ಜನವರಿ 2018, 19:47 IST
ಅಕ್ಷರ ಗಾತ್ರ

ಬೆಂಗಳೂರು: ‘ಪರಿಷ್ಕೃತ ನಗರ ಮಹಾಯೋಜನೆ 2031’ ಕುರಿತು ಜನಾಗ್ರಹ ಸಂಸ್ಥೆ ನಾಗರಿಕರಿಂದ ಪ್ರತ್ಯೇಕವಾಗಿ ಸಲಹೆಗಳನ್ನು ಆಹ್ವಾನಿಸಿತ್ತು. ಇಲ್ಲಿಯವರೆಗೆ 1,074 ಸಲಹೆಗಳು ಬಂದಿವೆ.

ಪತ್ರ ಅಥವಾ ಇಮೇಲ್‌ ಮೂಲಕ ಸಲಹೆಗಳನ್ನು ಸಲ್ಲಿಸಬಹುದು ಎಂದು ಸಂಸ್ಥೆ ಜನವರಿ 23ಕ್ಕೆ ಪ್ರಕಟಿಸಿತ್ತು. ಬಿಡಿಎ ಪ್ರಕಟಿಸಿರುವ ಕರಡನ್ನು ಜನ
ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಸಿದ್ಧಪಡಿಸಲು ಐ ಚೇಂಜ್‌ ಮೈ ಸಿಟಿ ಹಾಗೂ ಸಿವಿಕ್‌ ಸಂಸ್ಥೆ ಪ್ರಯತ್ನಿಸುತ್ತಿವೆ.

ಸಲಹೆಗಳನ್ನು ಪಡೆದದ್ದು ಹೀಗೆ: ಆರ್‌ಎಂಪಿ ಮುಖ್ಯ ವರದಿಯ ಲಿಂಕ್‌ ಜೊತೆಗೆ 13 ವಿವಿಧ ವಿಭಾಗಗಳ ಬಗ್ಗೆ ಸಾರಾಂಶ ನೀಡಿ ಪಟ್ಟಿ ಮಾಡಲಾಗಿತ್ತು. ನಾಗರಿಕರು ಅದನ್ನು ಓದಿ, ಪ್ರತಿ ವಿಭಾಗದಲ್ಲೂ 1ರಿಂದ 10ರವರೆಗೆ ಅಂಕ ಹಾಗೂ ಸಮರ್ಪಕ ಟಿಪ್ಪಣಿ ನೀಡಬೇಕಿತ್ತು.

ಪರಿಸರ, ವಸತಿ, ಭೂಬಳಕೆ, ಸಂಚಾರ ದಟ್ಟಣೆ, ತ್ಯಾಜ್ಯ ನಿರ್ವಹಣೆ ಮತ್ತು ಉದ್ಯಾನಗಳ ಬಗ್ಗೆ ಜನರು ಹೆಚ್ಚು ಮತ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT