ಸಂಚಾರ ನಿಯಮ ಉಲ್ಲಂಘನೆ ಪತ್ತೆಗೆ ಸ್ಮಾರ್ಟ್‌ಫೋನ್‌

7
ದಂಡ ವಿಧಿಸುವ ಪ್ರಕ್ರಿಯೆ ಸುಲಭ

ಸಂಚಾರ ನಿಯಮ ಉಲ್ಲಂಘನೆ ಪತ್ತೆಗೆ ಸ್ಮಾರ್ಟ್‌ಫೋನ್‌

Published:
Updated:
ಸಂಚಾರ ನಿಯಮ ಉಲ್ಲಂಘನೆ ಪತ್ತೆಗೆ ಸ್ಮಾರ್ಟ್‌ಫೋನ್‌

ಬೆಂಗಳೂರು: ಸವಾರರು ಸಂಚಾರ ನಿಯಮ ಉಲ್ಲಂಘಿಸುವುದನ್ನು ಪೊಲೀಸರು ಇನ್ನು ಮುಂದೆ ಸ್ಮಾರ್ಟ್‌ಫೋನ್‌ನಲ್ಲಿ ಚಿತ್ರೀಕರಿಸಿ ದಂಡ ವಿಧಿಸಲಿದ್ದಾರೆ.

ಅದಕ್ಕಾಗಿ ಸಂಚಾರ ಪೊಲೀಸರಿಗೆ 88 ಸ್ಮಾರ್ಟ್‌ಫೋನ್‌ಗಳನ್ನು ಸೋಮವಾರ ವಿತರಿಸಲಾಗಿದೆ. ಈ ಮೊಬೈಲ್‌ನಲ್ಲಿ ‘ನಿಯಮ ಉಲ್ಲಂಘನೆ ದಾಖಲು’ ಆ್ಯಪ್‌ ಇದ್ದು, ಇದರಿಂದ ದಂಡ ವಿಧಿಸುವುದು ಸುಲಭವಾಗಲಿದೆ.

ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರ ಬಳಿ ಈ ಸ್ಮಾರ್ಟ್‌ಫೋನ್‌ ಇರಲಿವೆ.  ಯಾರಾದರೂ ನಿಯಮ ಉಲ್ಲಂಘಿಸಿ ಪರಾರಿಯಾಗಲು ಯತ್ನಿಸಿದರೆ, ಚಿತ್ರೀಕರಿಸಿ ವಿಡಿಯೊವನ್ನು ವಾಹನ ನೋಂದಣಿ ಸಂಖ್ಯೆ ಸಮೇತ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಲಿದ್ದಾರೆ.

ಸಂಚಾರ ನಿಯಂತ್ರಣ ಕೇಂದ್ರದ ಸರ್ವರ್‌ನಲ್ಲಿ ಆ ಮಾಹಿತಿ ದಾಖಲಾಗಲಿದೆ. ಕೇಂದ್ರದ ಸಿಬ್ಬಂದಿ ಆ ಮಾಹಿತಿ ಪರಿಶೀಲಿಸಿ ಸಂಬಂಧಪಟ್ಟ ಸವಾರರಿಗೆ ದಂಡದ ರಶೀದಿ ಕಳುಹಿಸಲಿದ್ದಾರೆ.

‘ನಿಯಮ ಉಲ್ಲಂಘಿಸಿದ ಸವಾರರ ಪೈಕಿ, ಪೊಲೀಸರಿಂದ ತಪ್ಪಿಸಿಕೊಳ್ಳುವವರೇ ಹೆಚ್ಚು. ವಾಹನ ನೋಂದಣಿ ಸಂಖ್ಯೆಯನ್ನು ಕಾಗದದಲ್ಲಿ ಬರೆದುಕೊಂಡು, ಕೆಲ ದಿನ ಬಿಟ್ಟು ದಂಡ ವಿಧಿಸಲು ಪ್ರಯತ್ನಿಸಿದರೆ ಪುರಾವೆ ಕೇಳುತ್ತಾರೆ. ನಮ್ಮ ಬಳಿ ಒಮ್ಮೊಮ್ಮೆ ಪುರಾವೆಗಳು ಇರುವುದಿಲ್ಲ. ಪುರಾವೆ ಸಮೇತ ದಾಖಲಿಸಲು ಸ್ಮಾರ್ಟ್‌ಫೋನ್‌ ನೀಡಿದ್ದೇವೆ’ ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry