ಪಾಕಿಸ್ತಾನದ ವಿರುದ್ಧ 203 ರನ್‌ಗಳ ಭರ್ಜರಿ ಜಯ: ಫೈನಲ್‌ಗೆ ಭಾರತ

7

ಪಾಕಿಸ್ತಾನದ ವಿರುದ್ಧ 203 ರನ್‌ಗಳ ಭರ್ಜರಿ ಜಯ: ಫೈನಲ್‌ಗೆ ಭಾರತ

Published:
Updated:
ಪಾಕಿಸ್ತಾನದ ವಿರುದ್ಧ 203 ರನ್‌ಗಳ ಭರ್ಜರಿ ಜಯ: ಫೈನಲ್‌ಗೆ ಭಾರತ

ಕ್ರೈಸ್ಟ್ ಚರ್ಚ್‌, ನ್ಯೂಜಿಲೆಂಡ್‌: ಇಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್‌ ಕ್ರಿಕೆಟ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡ ಭರ್ಜರಿ 203 ರನ್‌ಗಳ ಜಯ ಸಾಧಿಸಿ ಫೈನಲ್ ಪ್ರವೇಶಿಸಿದೆ.

ಟಾಸ್ ಗೆದ್ದು ಬ್ಯಾಂಟಿಂಗ್ ಆರಿಸಿಕೊಂಡಿದ್ದ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ ಶುಬ್ಮಾನ್ ಗಿಲ್ ಅವರ ಶತಕದ (102) ನೆರವಿನಿಂದ 9 ವಿಕೆಟ್ ನಷ್ಟಕ್ಕೆ 272 ರನ್‌ ಗಳಿಸಿತ್ತು. ಆರಂಭದಲ್ಲಿ ನಾಯಕ ಪೃಥ್ವಿ ಶಾ (41) ಹಾಗೂ ಮಂಜೋತ್ ಕಾರ್ಲಾ (47) ಅವರು ಉತ್ತಮ ಅಡಿಪಾಯ ಒದಗಿಸಿದ್ದು, ತಂಡದ ರನ್‌ ಗಳಿಕೆ ಏರುಗತಿಯಲ್ಲಿ ಸಾಗಲು ನೆರವಾಯಿತು.

273 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ ಕೇವಲ 29.3 ಓವರ್‌ಗಳಲ್ಲಿ 69 ರನ್ ಗಳಿಸಿ ಆಲೌಟ್ ಆಯಿತು. ಭಾರತದ ಪರ ಇಶಾನ್ ಪೊರೆಲ್ 4 ವಿಕೆಟ್ ಕಬಳಿಸಿದರು. ಶಿವಸಿಂಗ್ ಮತ್ತು ರಿಯಾನ್ ಪರಾಗ್ ತಲಾ 2 ವಿಕೆಟ್ ಪಡೆದರು.

ಮೂರು ಬಾರಿ ಚಾಂಪಿಯನ್ ಆಗಿರುವ ಭಾರತ ತಂಡ ಪೃಥ್ವಿ ಶಾ ನಾಯಕತ್ವದಲ್ಲಿ ಇಲ್ಲಿಯವರೆಗೆ ಅತ್ಯುತ್ತಮ ಆಟ ಆಡಿದ್ದು, ಲೀಗ್ ಹಂತದ ಮೂರು ಪಂದ್ಯಗಳು ಮತ್ತು ಬಾಂಗ್ಲಾದೇಶ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿಯೂ ಏಕಪಕ್ಷೀಯ ಜಯ ಸಾಧಿಸಿದೆ. ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ.

19 ವರ್ಷದೊಳಗಿನವರ ವಿಶ್ವಕಪ್‌ ಕ್ರಿಕೆಟ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಜಯ ಗಳಿಸಿರುವ ಭಾರತ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry