ಯುವಕ ಆತ್ಮಹತ್ಯೆ: ಕೊಲೆ ಶಂಕೆ

7

ಯುವಕ ಆತ್ಮಹತ್ಯೆ: ಕೊಲೆ ಶಂಕೆ

Published:
Updated:
ಯುವಕ ಆತ್ಮಹತ್ಯೆ: ಕೊಲೆ ಶಂಕೆ

ಕಲಬುರ್ಗಿ: ಚಿಂಚೋಳಿ ತಾಲ್ಲೂಕು ಚಂದಾಪುರ ವ್ಯಾಪ್ತಿಯ ಗಂಗೂ ನಾಯಕ್ ತಾಂಡಾದಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದು, ಪಾಲಕರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ಕೊಲೆ ಮಾಡಿ ಮರಕ್ಕೆ ನೇಣು ಹಾಕಿ ಪ್ರಕರಣ ಮುಚ್ಚಿಹಾಕಲು ಯತ್ನಿಸಲಾಗುತ್ತಿದೆ ಎಂದು ಪಾಲಕರು ಆರೋಪಿಸಿದ್ದಾರೆ. ಅಮರ ಭೀಮರಾವ ರಾಠೋಡ (21) ಮೃತಪಟ್ಟ ವ್ಯಕ್ತಿ.ಸ್ಥಳದಲ್ಲಿ ಬಿಯರ್ ಬಾಟಲ್ ಮತ್ತು ಹಗ್ಗ ಪತ್ತೆಯಾಗಿದ್ದು ಪಾರ್ಟಿ ಮಾಡಿ ಯುವಕನನ್ನು ಕೊಲೆ ಮಾಡಿರುವ ಶಂಕೆಯಿದೆ.

ನೇಣು ಬಿಗಿದ ಸ್ಥಿತಿಯಲ್ಲಿರುವ ಯುವಕನ ಕಾಲುಗಳು ನೆಲಕ್ಕೆ ತಾಗಿವೆ. ಹೀಗಾಗಿ ಪ್ರಕರಣದ ಬಗ್ಗೆ ಅನುಮಾನಗಳು ಹೆಚ್ಚಾಗಿವೆ ಎಂದು ಪಾಲಕರು ಆರೋಪಿಸಿದ್ದಾರೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry