ಫೇಸ್‌ಬುಕ್‌ನಲ್ಲಿ ಕಲ್ಲಡ್ಕ ಡಾ.ಪ್ರಭಾಕರ ಭಟ್‌ ಅವಹೇಳನ

7

ಫೇಸ್‌ಬುಕ್‌ನಲ್ಲಿ ಕಲ್ಲಡ್ಕ ಡಾ.ಪ್ರಭಾಕರ ಭಟ್‌ ಅವಹೇಳನ

Published:
Updated:
ಫೇಸ್‌ಬುಕ್‌ನಲ್ಲಿ ಕಲ್ಲಡ್ಕ ಡಾ.ಪ್ರಭಾಕರ ಭಟ್‌ ಅವಹೇಳನ

ಮಂಗಳೂರು: ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ ಭಟ್‌ ಅವರನ್ನು ಅವಹೇಳನ ಮಾಡುವಂತಹ ಬರಹವೊಂದನ್ನು ಫೇಸ್‌ಬುಕ್‌ ಪುಟವೊಂದರಲ್ಲಿ ಪ್ರಕಟಿಸಿದ್ದು, ಭಟ್‌ ಬೆಂಬಲಿಗರು ಮತ್ತು ವಿರೋಧಿಗಳ ನಡುವೆ ಮಾತಿನ ಸಮರಕ್ಕೆ ಕಾರಣವಾಗಿದೆ.

ಈ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

‘ಟ್ರೂ ಮೀಡಿಯಾ ನೆಟ್‌ವರ್ಕ್‌’ ಎಂಬ ಹೆಸರಿನ ಫೇಸ್‌ಬುಕ್‌ ಪುಟದಲ್ಲಿ ಭಟ್‌ ಗಣವೇಷದಲ್ಲಿರುವ ಚಿತ್ರ ಹಾಕಲಾಗಿದೆ. ಭಟ್‌ ಭಯೋತ್ಪಾದಕ ಎಂಬರ್ಥದಲ್ಲಿ ಅಡಿಬರಹ ನೀಡಲಾಗಿದೆ. ಪ್ಯಾಂಟ್‌ ಧರಿಸಿರುವ ಭಟ್‌ ಕುರಿತು ಟೀಕಿಸಲಾಗಿದೆ. ಈ ಚಿತ್ರ ಪ್ರಕಟಿಸಿರುವುದನ್ನು ವಿರೋಧಿಸಿರುವ  ಸಂಘ ಪರಿವಾರದ ಕಾರ್ಯಕರ್ತರು, ಫೇಸ್‌ಬುಕ್‌ ಪುಟದ ಅಡ್ಮಿನ್‌ಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry