‘ವೋಟ್‌ ಮಾಡೋಣ ಬನ್ನಿ’ ಯುವ ಅಭಿಯಾನ

7

‘ವೋಟ್‌ ಮಾಡೋಣ ಬನ್ನಿ’ ಯುವ ಅಭಿಯಾನ

Published:
Updated:
‘ವೋಟ್‌ ಮಾಡೋಣ ಬನ್ನಿ’ ಯುವ ಅಭಿಯಾನ

ಮಂಗಳೂರು: ‘ಯುವಸಮುದಾಯ ಮತದಾನ ಮಾಡುವಾಗ ಎಚ್ಚರಿಕೆ ವಹಿಸಬೇಕು. ನಮ್ಮಿಂದಲೇ ಈ ಬದಲಾವಣೆ ಆರಂಭವಾಗಬೇಕು’ ಎಂಬ ದನಿ ಹೊಸ ಮತದಾರರಿಂದ ಕೇಳಿಬಂತು.

ಬಂಟ್ವಾಳ ತಾಲ್ಲೂಕಿನ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಪ್ರಜಾವಾಣಿ’ ಮತ್ತು ಕಾಲೇಜಿನ ರಾಜ್ಯಶಾಸ್ತ್ರ ಸಂಘ ಜಂಟಿಯಾಗಿ ಆಯೋಜಿಸಿದ್ದ ‘ವೋಟ್‌ ಮಾಡೋಣ ಬನ್ನಿ– ಯುವ ಅಭಿಯಾನ ಮತ್ತು ಪ್ರಜಾಪ್ರಭುತ್ವದಲ್ಲಿ ಮತದಾನದ ಮಹತ್ವ’ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಮುದಾಯದಿಂದ ಈ ಅಭಿಪ್ರಾಯ ವ್ಯಕ್ತವಾಯಿತು.

‘ಯುವಸಮುದಾಯ ಮತದಾನ ಮಾಡುವಾಗ ಎಚ್ಚರಿಕೆ ವಹಿಸಬೇಕು. ನಮ್ಮಿಂದಲೇ ಈ ಬದಲಾವಣೆ ಆರಂಭವಾಗಬೇಕು’ ಎಂಬ ದನಿ ಹೊಸ ಮತದಾರರಿಂದ ಕೇಳಿಬಂತು.

‘ಪ್ರಜಾಪ್ರಭುತ್ವದಲ್ಲಿ ಮತದಾನದ ಮಹತ್ವ’ ಕುರಿತು ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ರೊನಾಲ್ಡ್‌ ಪ್ರವೀಣ್‌ ಕೊರೆಯಾ ಉಪನ್ಯಾಸ ನೀಡಿ, ‘ವರ್ಷದಿಂದ ವರ್ಷಕ್ಕೆ ದೇಶದಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿದೆ. ವಿದ್ಯಾವಂತರು ಮತದಾನ ಪ್ರಕ್ರಿಯೆಯಿಂದ ದೂರ ಉಳಿಯುತ್ತಿರುವುದು ಆತಂಕಕಾರಿ ಬೆಳವಣಿಗೆ. ರಾಜಕೀಯ ವ್ಯವಸ್ಥೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬೇಕಾದ ಯುವ ಸಮುದಾಯ ಮತದಾನದಲ್ಲಿ ಉತ್ಸಾಹ ತೋರಬೇಕಿದೆ. ಯಾವುದೇ ಕಾರಣಕ್ಕೂ ಮತವನ್ನು ಹಣಕ್ಕಾಗಿ ಮಾರಾಟ ಮಾಡಬಾರದು’ ಎಂದು ಹೇಳಿದರು.

ಇತಿಹಾಸವನ್ನು ಗಮನಿಸಿದರೆ ಸಮ್ಮಿಶ್ರ ಸರ್ಕಾರಕ್ಕಿಂತ ಒಂದು ಪಕ್ಷದ ಸರ್ಕಾರಕ್ಕೆ ಆಯುಷ್ಯ ಹೆಚ್ಚು. ಸಮ್ಮಿಶ್ರ ಸರ್ಕಾರಗಳ ಆಯಸ್ಸು ಸರಾಸರಿ 20 ತಿಂಗಳಾದರೆ, ಪೂರ್ಣ ಬಹುಮತ ಪಡೆದ ಪಕ್ಷದ ಸರ್ಕಾರದ ಸರಾಸರಿ ಆಯಸ್ಸು 4.5 ವರ್ಷ ಆಗಿದೆ. ಹೀಗಾಗಿ, ಸಮ್ಮಿಶ್ರ ಸರ್ಕಾರ ರಚನೆಯಾದರೆ ಚುನಾವಣೆ ಬೇಗ ಎದುರಾಗುವುದರಿಂದ ಜನರ ಹಣವೇ ಅನಗತ್ಯವಾಗಿ ಪೋಲಾಗುತ್ತದೆ. ಮತದಾರರೂ ಒಂದೇ ಪಕ್ಷಕ್ಕೆ ಬಹುಮತ ನೀಡಿದರೆ ಉತ್ತಮ ಎಂದು ರೊನಾಲ್ಡ್‌ ಅಭಿಪ್ರಾಯಪಟ್ಟರು.

ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ, ಲಂಚ ಹೆಚ್ಚುತ್ತಿದ್ದು ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಲಂಚ ಪಡೆಯುವ ವ್ಯಕ್ತಿಗೆ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಲು ಅವಕಾಶ ನೀಡಬಾರದು, ಜನಪ್ರತಿನಿಧಿ ಯಾವುದೇ ಒಂದು ಪಕ್ಷದ ಚಿಹ್ನೆಯಲ್ಲಿ ಗೆದ್ದರೂ ಬಳಿಕ ಪಕ್ಷಾತೀತವಾಗಿ ಕೆಲಸ ಮಾಡಬೇಕು. ಅತ್ಯಾಚಾರ, ಇನ್ನಿತರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಜನಪ್ರತಿನಿಧಿಗಳು ರಕ್ಷಣೆ ನೀಡಬಾರದು.. ಎಂಬ ಬೇಡಿಕೆಗಳು ವ್ಯಕ್ತವಾದವು.

ಪಲಾಯನ ಮಾಡದಿರಿ

ಭಾರತ ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಪ್ರಜೆಗಳೇ ಪ್ರಭುಗಳು. ಮತ ಎಂಬ ಅಸ್ತ್ರವನ್ನು ಮತದಾರರು ಪರಿಣಾಮಕಾರಿಯಾಗಿ ಬಳಸಬೇಕು. ಮತದಾನದಲ್ಲಿ ಯುವಸಮುದಾಯ ಪಲಾಯನ ಮಾಡಬಾರದು. ಸದೃಢ ಸಮಾಜದ ಕಟ್ಟಲು ಪ್ರತಿ ಮತವೂ ನಿರ್ಣಾಯಕ. ಯಾವುದೇ ಆಮಿಷ ಅಥವಾ ಒತ್ತಡಕ್ಕೆ ಒಳಗಾಗಿ ಮತ ಚಲಾಯಿಸಬಾರದು ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ.ಹರಿಪ್ರಸಾದ್‌ ಬಿ. ಶೆಟ್ಟಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry