ಅವ್ವ ಮಹದೇಶ್ ವಿರುದ್ಧ ಹೆಚ್ಚುವರಿ ದೋಷಾರೋಪ

7

ಅವ್ವ ಮಹದೇಶ್ ವಿರುದ್ಧ ಹೆಚ್ಚುವರಿ ದೋಷಾರೋಪ

Published:
Updated:

ಮೈಸೂರು: ಜೋಡಿಕೊಲೆಯಲ್ಲಿ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ಪಾಲಿಕೆಯ ಮಾಜಿ ಸದಸ್ಯ ಸಿ.ಮಹದೇಶ್‌ ಅಲಿಯಾಸ್‌ ಅವ್ವ ಮಾದೇಶ್‌ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿ (ಕೋಕಾ) ತನಿಖೆ ನಡೆಸುತ್ತಿರುವ ಪೊಲೀಸರು ನ್ಯಾಯಾಲಯಕ್ಕೆ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

3,500 ಪುಟಗಳ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದರು. ಇದರಿಂದ ದೋಪಾರೋಪ ಪಟ್ಟಿಯ ಗಾತ್ರವು 11 ಸಾವಿರ ಪುಟಗಳಿಗೆ ವಿಸ್ತರಿಸಿದೆ. ಕೋಕಾ ಕಾಯ್ದೆಯಡಿ ತನಿಖೆ ನಡೆದ ಜಿಲ್ಲೆಯ ಮೊದಲ ಪ್ರಕರಣ ಇದು.

ಒಂದೂವರೆ ವರ್ಷದಿಂದ ತಲೆಮರೆಸಿಕೊಂಡಿದ್ದ ಅವ್ವ ಮಹದೇಶ್‌ ಆಪ್ತ ರವಿ ಅಲಿಯಾಸ್‌ ನಂದಕುಮಾರ್‌ ಈಚೆಗೆ ಪೊಲೀಸರ ಬಲೆಗೆ ಬಿದ್ದಿದ್ದ. ಇದರಿಂದ ಬಂಧಿತರ ಸಂಖ್ಯೆ 29ಕ್ಕೆ ಏರಿತ್ತು. ತನಿಖೆಯ ವೇಳೆ ಈತ ನೀಡಿದ ಮಾಹಿತಿಯನ್ನು ಹೆಚ್ಚುವರಿ ದೋಷಾರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ. ಆಸ್ತಿ ವಿವರ, ಡಿಎನ್‌ಎ ಪರೀಕ್ಷೆಯ ವರದಿ ಕೂಡ ಇದರಲ್ಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಹುಣಸೂರಿನಲ್ಲಿ 2008ರಲ್ಲಿ ನಡೆದ ಜೋಡಿಕೊಲೆ ಪ್ರಕರಣದಲ್ಲಿ ಅವ್ವ ಮಹದೇಶ್‌, ಈತನ ಸಹೋದರ ಮಂಜುನಾಥ್‌ ಸೇರಿ 8 ಮಂದಿಗೆ ಜೀವಾವಧಿ ಶಿಕ್ಷೆಯಾಗಿದೆ. ಒಂದು ವರ್ಷ ಎಂಟು ತಿಂಗಳಿಂದ ಈತ ಜೈಲಿನಲ್ಲಿದ್ದಾನೆ. ಶಿಕ್ಷೆಗೆ ಪ್ರತಿಕಾರವಾಗಿ ಎದುರಾಳಿ ರೌಡಿಗಳನ್ನು ಕೊಲೆ ಮಾಡಿಸಿದ ಬಳಿಕ ಈತನ ವಿರುದ್ಧ ಪೊಲೀಸರು ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.

ಸಮಾಜಘಾತುಕ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ ಆರೋಪಿ ಅಕ್ರಮವಾಗಿ ಹಣ ಹಾಗೂ ಆಸ್ತಿ ಸಂಪಾದಿಸಿದ್ದ. ಈ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಪೊಲೀಸರು ಜಾರಿ ನಿರ್ದೇಶನಾಲಯಕ್ಕೆ (ಇಡಿ) ಮನವಿ ಸಲ್ಲಿಸಿದ್ದರು. ನಗರದ 12 ಭಾಗಗಳಲ್ಲಿ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ ಸುಮಾರು ₹ 5.35 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry