₹1.06 ಕೋಟಿ ಮಿಗತೆಯ ಆಯವ್ಯಯ

7

₹1.06 ಕೋಟಿ ಮಿಗತೆಯ ಆಯವ್ಯಯ

Published:
Updated:
₹1.06 ಕೋಟಿ ಮಿಗತೆಯ ಆಯವ್ಯಯ

ಉಡುಪಿ: ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ₹1.06 ಕೋಟಿ ಮಿಗತೆಯ ಬಜೆಟ್‌ ಮಂಡಿಸಿದರು.

ಆರಂಭದ ಶಿಲ್ಕು ₹28.69 ಕೋಟಿ ಮತ್ತು ವರ್ಷದ ಸ್ವೀಕೃತಿ ₹62.61 ಕೋಟಿ ಸೇರಿದಂರೆ ಒಟ್ಟು ಸ್ವೀಕೃತಿಗಳು ಸೇರಿದಂತೆ 91.03 ಕೋಟಿ ಆದಾಯದ ನಿರೀಕ್ಷೆ ಇದೆ. ₹90.24 ಕೋಟಿ ಒಟ್ಟು ವೆಚ್ಚ ಎಂದು ಅಂದಾಜಿಸಲಾಗಿದೆ ಎಂದು ಹೇಳಿದರು.

ಪ್ರಮುಖ ಅಭಿವೃದ್ಧಿ ಕಾರ್ಯಕ್ರಮಗಳ ವಿವರ: ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗೆ ₹ 3.66ಕೋಟಿ, ಆರ್ಥಿಕವಾಗಿ ಹಿಂದುಳಿದವರಿಗಾಗಿ ₹ 55 ಲಕ್ಷ, ಘನತ್ಯಾಜ್ಯ ನಿರ್ವಹಣೆಗೆ ₹ 13.16 ಕೋಟಿ, ಉಡುಪಿ, ಮಣಿಪಾಲದಲ್ಲಿ ವಾಣಿಜ್ಯ ವಹಿವಾಟು ಹೆಚ್ಚಾಗಿರುವ ಸ್ಥಳವನ್ನು ಗುರುತಿಸಿ ವಾಣಿಜ್ಯ ಮಳಿಗೆ ನಿರ್ಮಿಸಲು ₹ 1.25 ಕೋಟಿ, ನಗರಸಭಾ ಕಚೇರಿಯಲ್ಲಿ ಸ್ಥಳಾವಕಾಶದ ಕೊರತೆ ಇರುವುದರಿಂದ ಸಾರ್ವಜನಿಕರಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕಾಗಿ ನೀಲಿ ನಕ್ಷೆ ಅಂತಿಮ ಹಂತದಲ್ಲಿದ್ದು, ಅದಕ್ಕೆ ₹ 15ಕೋಟಿ ವೆಚ್ಚ ಅಂದಾಜಿಸಲಾಗಿದೆ. ಅನುಮತಿ ಇಲ್ಲದೆ ಹಾಕುವ ಬ್ಯಾನರ್‌ಗಳ ನಿಗದಿತ ಸಂಖ್ಯೆಯ ಮಿತಿಯಲ್ಲಿ ಅನುಮತಿ ನೀಡಲು ಕ್ರಮ ಕೈಗೊಂಡಿದ್ದು, ಕೇವಲ ಬಟ್ಟೆ ಬ್ಯಾನರ್‌ಗಳಿಗೆ ಅನುಮತಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

ದಾರಿದೀಪದ ದುರಸ್ತಿಗೆ ಹಾಗೂ ನಿರ್ವಹಣೆಗೆ ₹1.40 ಕೋಟಿ, ನೀರು ಸರಬರಾಜು ಪೈಪ್‌ ಲೈನ್‌ ದುರಸ್ತಿ ಹಾಗೂ ನಿರ್ವಹಣೆಗೆ ₹ 3.50 ಕೋಟಿ, ನೈರ್ಮಲ್ಯ, ಘನ ತ್ಯಾಜ್ಯ ಮತ್ತು ನಿರ್ವಹಣೆಗೆ ₹ 7.90ಕೋಟಿ, ಒಳಚರಂಡಿ ಯೋಜನೆಗೆ ₹1.30ಕೋಟಿ, ಕೊಳಚೆ ನೀರು ಶುದ್ಧೀಕರಣ ಘಟಕ ಮತ್ತು ಅಭಿವೃದ್ಧಿಗೆ 1.20 ಕೋಟಿ, ಉದ್ಯಾನಗಳ ದುರಸ್ತಿಗೆ ₹ 25 ಲಕ್ಷ ಕಾಯ್ದಿರಿಸಲಾಗಿದೆ ಎಂದರು.

ಆದಾಯ ಅಂದಾಜು: 14ನೇ ಕೇಂದ್ರ ಹಣಕಾಸು ಆಯೋಗದ ಅನುದಾನ ₹ 5.67ಕೋಟಿ, ರಾಜ್ಯ ಹಣಕಾಸು ಆಯೋಗದ ಮುಕ್ತನಿಧಿ ಅನುದಾನ ₹ 5.27 ಕೋಟಿ, ವಿದ್ಯುತ್‌ ಅನುದಾನ ₹ 7.27 ಕೋಟಿ, ₹10 ಕೋಟಿ ಎಸ್‌ಎಫ್‌ಸಿ ಅನುದಾನ, ಸಿಬ್ಬಂದಿ ವೇತನ ಅನುದಾನ ₹4.43 ಕೋಟಿ, ಸ್ವಯಂ ಘೋಷಿತ ಆಸ್ತಿ ತೆರಿಗೆಯಿಂದ ₹11.02ಕೋಟಿ, ಸ್ವಚ್ಛ ಭಾರತ್‌ ಮಿಷನ್‌ ಅನುದಾನ ₹2 ಕೋಟಿ, ಅಮೃತ ಯೋಜನೆಯ ಅನುದಾನ ₹75 ಲಕ್ಷ , ಎಸ್‌ಎಫ್‌ಸಿ ವಿಶೇಷ ಅನುದಾನ ₹10 ಕೋಟಿ ನಿರೀಕ್ಷಿಸಲಾಗಿದೆ.

ವಾಣಿಜ್ಯ ಸಂಕೀರ್ಣಗಳ ಬಾಡಿಗೆಯಿಂದ ₹1.50 ಕೋಟಿ ಹಾಗೂ ನೀರಿನ ಸರಬರಾಜು ಶುಲ್ಕದಿಂದ ₹9.00 ಕೋಟಿ, ಜಾಹೀರಾತು ಶುಲ್ಕ ₹90 ಲಕ್ಷ, ಕಟ್ಟಡ ಪರವಾನಿಗೆ ಶುಲ್ಕ ₹40 ಲಕ್ಷ, ನೀರು ಸರಬರಾಜು ಶುಲ್ಕ ₹9 ಕೋಟಿ, ಒಳಚರಂಡಿ ಜೋಡಣೆಯಿಂದ ₹16 ಲಕ್ಷ, ವಾಣಿಜ್ಯ ಸಂಕೀರ್ಣದಿಂದ ₹1.50 ಕೋಟಿ ಆದಾಯವನ್ನು ಅಂದಾಜಿಸಲಾಗಿದೆ2018–19ನೇ ಸಾಲಿನ ವೆಚ್ಚದ ಅಂದಾಜು: ಕಚೇರಿ ನಿರ್ವಹಣೆ ಮತ್ತು ಆಡಳಿತಾತ್ಮಕ ವೆಚ್ಚಗಳಿಗೆ ₹ 8.93 ಕೋಟಿ ಮೀಸಲಿಡಲಾಗಿದೆ. ಲೋಕೋಪಯೋಗಿ ಕಾಮಗಾರಿಗೆ ₹2.40ಕೋಟಿ, ಕುಡಿಯುವ ನೀರಿನ ಸರಬರಾಜು ಮತ್ತು ನಿರ್ವಹಣೆಗೆ ₹3.50 ಕೋಟಿ, ದಾರಿದೀಪಗಳ ಅಳವಡಿಕೆ, ನಿರ್ವಹಣೆ ಮತ್ತು ದುರಸ್ತಿಗೆ ₹2.68 ಕೋಟಿ, ನೈರ್ಮಲ್ಯ ಮತ್ತು ಘನತ್ಯಾಜ್ಯ ವಸ್ತು ನಿರ್ವಹಣೆಗೆ ಒಟ್ಟು ₹10.25ಕೋಟಿ, ಒಳಚರಂಡಿ ಯೋಜನೆಗಳು ₹2.50 ಕೋಟಿ, ಉದ್ಯಾನಗಳು ₹1.55 ಕೋಟಿ, ಬಡಜನರ ಕಲ್ಯಾಣ ನಿಧಿ ₹55 ಲಕ್ಷ ಅಂಗವಿಕಲರ ಕಲ್ಯಾಣ ನಿಧಿ ₹22 ಲಕ್ಷ, ನಲ್ಮ್ ಯೋಜನೆಗೆ ₹20 ಲಕ್ಷ ಕಾಯ್ದಿರಿಸಲಾಗಿದೆ.

ಪರಿಶಿಷ್ಟ ಜಾತಿ– ಪಂಗಡದವರ ಕಲ್ಯಾಣಕ್ಕಾಗಿ ನಗರಸಭೆ ನಿಧಿಯಿಂದ ₹60 ಲಕ್ಷ, ಎಸ್‌ಎಫ್‌ಸಿ ಮುಕ್ತನಿಧಿಯಿಂದ ₹1.40 ಕೋಟಿ, ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನದಿಂದ ₹1.66 ಕೋಟಿ ನಿಗದಿ ಪಡಿಸಲಾಗಿದೆ. ನಗರಸಭೆಯ ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್‌, ಪೌರಾಯುಕ್ತ ಮಂಜುನಾಥಯ್ಯ ಇದ್ದರು.

ನಗರದಲ್ಲಿ 24X7 ಕುಡಿಯುವ ನೀರು

ವಾರಾಹಿ ನದಿಯಿಂದ ನೀರು ಉಡುಪಿ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಪೂರೈಕೆಗಾಗಿ ವಾರಾಹಿ ನದಿ ಮೂಲದಿಂದ ಪ್ರತಿದಿನ 42 ಎಂಎಲ್‌ಡಿ ನೀರನ್ನು ಪೈಪ್‌ಲೈನ್ ಮೂಲಕ ಬಜೆ ಅಣೆಕಟ್ಟಿಗೆ ಹರಿಸಿ ಹೆಚ್ಚುವರಿಯಾಗಿ ನೀರು ಶುದ್ಧೀಕರಣ ಘಟಕ ನಿರ್ಮಿಸಲಾಗುತ್ತದೆ. ಅವಶ್ಯ ಇರುವ ಕಡೆ ಆರು ಓವರ್‌ಹೆಡ್ ಟ್ಯಾಂಕ್‌ಗಳನ್ನು ನಿರ್ಮಿಸಿ ಶಾಶ್ವತವಾಗಿ ದಿನದ 24ಗಂಟೆಗಳ ಕುಡಿಯುವ ನೀರು ನೀಡುವ ₹270ಕೋಟಿ ವೆಚ್ಚದ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಹೇಳಿದರು

* * 

ವಿದ್ಯುತ್‌ ಉಳಿತಾಯ ನಿಟ್ಟಿನಲ್ಲಿ ವಾರ್ಡ್‌ಗಳ ಬೀದಿದೀಪಗಳಿಗೆ ಎಲ್‌.ಇ.ಡಿ ಬಲ್ಬ್‌ಗಳನ್ನು ಅಳವಡಿಸಿರುವುದು ಪ್ರಶಂಸನೀಯ.

ಎಂ.ಆರ್. ಪೈ.

ವಿರೋಧ ಪಕ್ಷದ ನಾಯಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry