ತೆರೆದಬಾವಿ ಮುಚ್ಚುವಂತೆ ಆಗ್ರಹಿಸಿ ಪ್ರತಿಭಟನೆ

7

ತೆರೆದಬಾವಿ ಮುಚ್ಚುವಂತೆ ಆಗ್ರಹಿಸಿ ಪ್ರತಿಭಟನೆ

Published:
Updated:

ಹುಕ್ಕೇರಿ: ತಾಲ್ಲೂಕಿನ ಹುಲ್ಲೋಳಿಹಟ್ಟಿಯ ಕುರುಬನಕೋಡಿಯಲ್ಲಿ ಬೇರೆ ಗ್ರಾಮದವರು ನಿರ್ಮಿಸುತ್ತಿರುವ ತೆರೆದಬಾವಿ ಮುಚ್ಚಿಸಬೇಕು ಎಂದು ಆಗ್ರಹಿಸಿ ರೈತರು ಭಾನುವಾರ ಪ್ರತಿಭಟನೆ ನಡೆಸಿದರು.

‘ಹುಲ್ಲೋಳಿ ಹಟ್ಟಿಯಲ್ಲಿ ಮೊದಲಿನಿಂದಲೂ ಕುಡಿಯುವ ನೀರಿಗೆ ಪರದಾಡುತ್ತಿದ್ದೇವೆ. ನೀರಾವರಿ ಸೌಲಭ್ಯ ಕಲ್ಪಿಸಲು ಸಣ್ಣ ನೀರಾವರಿ ಇಲಾಖೆಯು ₹ 2 ಕೋಟಿ ವೆಚ್ಚದಲ್ಲಿ ಕೆರೆ ನಿರ್ಮಾಣಕ್ಕೆ ಮಂಜೂರಾತಿ ನೀಡಿದೆ. ಕೆಲವರು ಕೆರೆ ಪಕ್ಕದಲ್ಲಿ ಬಾವಿ ತೋಡಿ ಪೈಪ್‌ಲೈನ್ ಅಳವಡಿಸಲು ಮುಂದಾಗಿದ್ದಾರೆ. ಇದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು’ ಎಂದು ರೈತರು ತಿಳಿಸಿದರು.

ಕ್ಷೇತ್ರದ ಶಾಸಕರು ಇತ್ತ ಗಮನಹರಿಸಬೇಕು ಎಂದು ಆಗ್ರಹಿಸಿದರು. ಕಾಡಪ್ಪ ಮಲ್ಲಪ್ಪ ಕುಗಟೋಳಿ, ಅಣ್ಣಪ್ಪ ಸದಾಶಿವ ಮಾಳಗೆ, ರಾಮಗೌಡ ಮಲ್ಲಪ್ಪ ಕುಗಟೋಳಿ, ಚಿಕ್ಕಪ್ಪ ಬಾಬು ರಜಪೂತ, ವಕೀಲ ಬಿ.ಎಸ್. ಕರಡಿ, ಬಸಗೌಡ ಪಾಟೀಲ, ಸಿದಗಿರೆಪ್ಪ ಅಪ್ಪಾಸಾಹೇಬ ಕುಗಟೋಳಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry