ಪಾಕಿಸ್ತಾನ ವಿರುದ್ಧ ಭಾರತದ ಗೆಲುವಿಗೆ ಕೋಚ್‌ ರಾಹುಲ್‌ ದ್ರಾವಿಡ್‌ಗೆ ಪ್ರಶಂಸೆ

7

ಪಾಕಿಸ್ತಾನ ವಿರುದ್ಧ ಭಾರತದ ಗೆಲುವಿಗೆ ಕೋಚ್‌ ರಾಹುಲ್‌ ದ್ರಾವಿಡ್‌ಗೆ ಪ್ರಶಂಸೆ

Published:
Updated:
ಪಾಕಿಸ್ತಾನ ವಿರುದ್ಧ ಭಾರತದ ಗೆಲುವಿಗೆ ಕೋಚ್‌ ರಾಹುಲ್‌ ದ್ರಾವಿಡ್‌ಗೆ ಪ್ರಶಂಸೆ

ನವದೆಹಲಿ: 19 ವರ್ಷದೊಳಗಿನವರ ವಿಶ್ವಕಪ್‌ ಕ್ರಿಕೆಟ್‌ನ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಜಯ ಸಾಧಿಸಿ ಫೈನಲ್ ಪ್ರವೇಶಿಸಿದ್ದು, ತಂಡದ ಕೋಚ್‌ ರಾಹುಲ್‌ ದ್ರಾವಿಡ್‌ಗೆ ಕ್ರೀಡಾಭಿಮಾನಿಗಳು ಟ್ವಿಟರ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ), ಹಿರಿಯ ಕ್ರಿಕೆಟಿಗರಾದ ಸಚಿನ್‌ ತೆಂಡೂಲ್ಕರ್‌, ವಿವಿಎಸ್‌ ಲಕ್ಷ್ಮಣ್‌ ಸೇರಿದಂತೆ ಅನೇಕರು ಟ್ವೀಟ್‌ ಮಾಡಿ ತಂಡವನ್ನು ಅಭಿನಂದಿಸಿದ್ದಾರೆ.

*

*

*

*

*

*

*

*

*

ನ್ಯೂಜಿಲೆಂಡ್‌ನ ಕ್ರೈಸ್ಟ್ ಚರ್ಚ್‌ ಅಂಗಳದಲ್ಲಿ ಮಂಗಳವಾರ ನಡೆದ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟಾಸ್‌ ಗೆದ್ದ ಭಾರತ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ಶುಭಮನ್‌ ಗೀಲ್‌ ಅವರ ಅಜೇಯ ಶತಕದ ನೆರವಿನಿಂದ ಭಾರತ ತಂಡ 272 ರನ್‌ ಗಳಿಸಿತು. 

ಈ ಗುರಿ ಬೆನ್ನತ್ತಿದ ಪಾಕ್‌ 29.3 ಓವರ್‌ಗಳಲ್ಲಿ 69 ರನ್‌ ಗಳಿಸಿ ಆಲೌಟ್‌ ಆಗಿದೆ.

ಮೂರು ಬಾರಿ ಚಾಂಪಿಯನ್ ಆಗಿರುವ ಭಾರತ ತಂಡ ಪೃಥ್ವಿ ಶಾ ನಾಯಕತ್ವದಲ್ಲಿ ಇಲ್ಲಿಯವರೆಗೆ ಅತ್ಯುತ್ತಮ ಆಟ ಆಡಿದ್ದು, ಲೀಗ್ ಹಂತದ ಮೂರು ಪಂದ್ಯಗಳು ಮತ್ತು ಬಾಂಗ್ಲಾದೇಶ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿಯೂ ಏಕಪಕ್ಷೀಯ ಜಯ ಸಾಧಿಸಿದೆ. ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ.

ಸೆಮಿಫೈನಲ್ ಪಂದ್ಯದಲ್ಲಿ 102* ರನ್‌ ಗಳಿಸಿ ಪಂದ್ಯ ಗೆಲ್ಲಿಸಿದ ಶುಭ್‌ಮನ್ ಗಿಲ್ ಟೂರ್ನಿಯಲ್ಲಿ ತಂಡದ ಪರ ಅತಿ ಹೆಚ್ಚು (341) ಕಲೆ ಹಾಕಿದ ಆಟಗಾರ ಎನಿಸಿದ್ದಾರೆ. ಅವರಿಗೆ ಇತ್ತೀಚಿಗೆ ನಡೆದ ಐಪಿಎಲ್‌ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಕೆ.ಕೆ.ಆರ್‌ ₹ 1.8 ಕೋಟಿ ನೀಡಿದೆ. ನಾಯಕ ಪೃಥ್ವಿ ಶಾಗೆ ಮುಂಬೈ ಇಂಡಿಯನ್ಸ್‌ ₹ 1.2 ಕೋಟಿ ನೀಡಿದೆ. ಈಗಾಗಲೇ ಟೂರ್ನಿಯಲ್ಲಿ ಮಿಂಚು ಹರಿಸಿರುವ ಈ ಆಟಗಾರರು ಫೈನಲ್‌ನಲ್ಲಿ ಯಾವ ರೀತಿ ಸಾಮರ್ಥ್ಯ ಮೆರೆಯುವರು ಎಂಬುದನ್ನು ಕಾದು ನೋಡಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry