ತ್ಯಾಜ್ಯದ ರಾಶಿ ತೆರವುಗೊಳಿಸಿ

7

ತ್ಯಾಜ್ಯದ ರಾಶಿ ತೆರವುಗೊಳಿಸಿ

Published:
Updated:

ತ್ಯಾಜ್ಯ ತೆರವಿಗೆ ಆಗ್ರಹ 

ಚಿಕ್ಕಬಳ್ಳಾಪುರ ನಗರದ ಕೋಟೆ ಪ್ರದೇಶದಲ್ಲಿರುವ ಚನ್ನಕೇಶವಸ್ವಾಮಿ ದೇವಾಲಯದ ಪಕ್ಕದ ರಸ್ತೆ ಬದಿಯಲ್ಲೇ ತ್ಯಾಜ್ಯ ಸುರಿದಿರುವುದರಿಂದ ದುರ್ವಾಸನೆ ಹೆಚ್ಚಾಗಿದೆ. ತ್ಯಾಜ್ಯ ಸುರಿಯುವ ಜಾಗದಲ್ಲಿ ಪೌರ ಕಾರ್ಮಿಕರು ಸರಿಯಾಗಿ ವಿಲೇವಾರಿ ಮಾಡುತ್ತಿಲ್ಲ. ಗಾಯದ ಮೇಲೆ ಬರೆ ಎಳೆದಂತೆ ಇತ್ತೀಚೆಗೆ ಇದೇ ಜಾಗದಲ್ಲಿ ಮನೆಯಲ್ಲಿರುವ ಅನುಪಯುಕ್ತ ವಸ್ತುಗಳನ್ನು ತಂದು ಸುರಿದು ಅಧ್ವಾನ ಮಾಡುತ್ತಿದ್ದಾರೆ. ಕೂಗಳತೆಯಲ್ಲೇ ನಗರಸಭೆ ಇದ್ದರೂ ಇಲ್ಲಿ ದುರ್ನಾತ ಬೀರುವ ಅಸಹ್ಯಕರ ವಾತಾವರಣ ನಿರ್ಮಾಣವಾಗಿದೆ.

ಕೂಡಲೇ ನಗರಸಭೆಯವರು ಇತ್ತ ಗಮನ ಹರಿಸಿ, ತ್ಯಾಜ್ಯವನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು. ಜತೆಗೆ ನಿಯಮಿತವಾಗಿ ಇಲ್ಲಿನ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕು

ಅಭಿಷೇಕ್‌, ಸ್ಥಳೀಯ ಹೋಟೆಲ್‌ ಮಾಲೀಕ

ಕಾಮಗಾರಿ ಪೂರ್ಣಗೊಳಿಸಿ

ಚಿಕ್ಕಬಳ್ಳಾಪುರದ ನಗರ್ತ ಪೇಟೆಯ ಹಳಾಳ್‌ ಗಂಡೆ ರಸ್ತೆಯಲ್ಲಿ ಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದರಿಂದ ಕೊಳಚೆ ನೀರು ಹರಿದು ಹೋಗದೆ ಮಡುಗಟ್ಟಿದೆ. ದುರ್ವಾಸನೆ ಹೆಚ್ಚಿದೆ. ಗಬ್ಬೆದ್ದು ನಾರುವ ಚರಂಡಿಯಿಂದ ಜನರು ಊಟ ಮಾಡಲು ಕಷ್ಟವಾಗಿದೆ. ನಗರಸಭೆಯವರು ಈ ಭಾಗದಲ್ಲಿ ನೈರ್ಮಲ್ಯ ಕಾಪಾಡುತ್ತಿಲ್ಲ. ಈ ಸಮಸ್ಯೆ ಕುರಿತು ಅನೇಕ ಬಾರಿ ನಗರಸಭೆಯವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನಗರಸಭೆಯವರು ಇತ್ತ ಗಮನ ಹರಿಸಿ ಚರಂಡಿ ಶುಚಿಗೊಳಿಸಬೇಕು. ಅರ್ಧಕ್ಕೆ ನಿಂತಿರುವ ಚರಂಡಿ ಕಾಮಗಾರಿ ಪೂರ್ಣಗೊಳಿಸಬೇಕು.

ರತ್ನಮ್ಮ, ಸ್ಥಳೀಯ ನಿವಾಸಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry