ಪರಶುರಾಂಪುರ: ರಾಸುಗಳಿಂದ ಕಂಬ ಎಳೆಯುವ ಸ್ಪರ್ಧೆ

7

ಪರಶುರಾಂಪುರ: ರಾಸುಗಳಿಂದ ಕಂಬ ಎಳೆಯುವ ಸ್ಪರ್ಧೆ

Published:
Updated:

ಪರಶುರಾಂಪುರ: ಪರಶುರಾಂಪುರ ಹೋಬಳಿಯ ನಾಗಗೊಂಡನಹಳ್ಳಿಯಲ್ಲಿ ಚಲುಮೆರುದ್ರಸ್ವಾಮಿ ರಥೋತ್ಸವ  ‌ ಪ್ರಯುಕ್ತ ರಾಸುಗಳಿಂದ ಎರಡೂವರೆ ಟನ್ ತೂಕದ ಕಲ್ಲು ಎಳೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು.

ಇದರಲ್ಲಿ ಭಾಗವಹಿಸಿದ್ದ ಬಿ.ಎಸ್. ಗೋಪಾಲ ಸಿರಿಗುಪ್ಪ ತಂಡ 20 ನಿಮಿಷದಲ್ಲಿ 4,000 ಅಡಿ ದೂರ ಕ್ರಮಿಸಿ ಮೊದಲ ಬಹುಮಾನ ಪಡೆದುಕೊಂಡಿತ್ತು. ಆಂಧ್ರಪ್ರದೇಶದ ಬಂಡಮಿಂದಪಳ್ಳಿಯ ಕೊಂಡಣ್ಣ ಅವರ ರಾಸುಗಳು 3,000 ಅಡಿ ಕ್ರಮಿಸಿ 2ನೇ ಬಹುಮಾನ ಹಾಗೂ ಮುಲುಕಲೇಡಿನ ತಿಪ್ಪೇಸ್ವಾಮಿ ಅವರ ರಾಸುಗಳು 2,766 ಅಡಿ ಕ್ರಮಿಸಿ 3ನೇ ಬಹುಮಾನ ತನ್ನದಾಗಿಸಿಕೊಂಡವು.

ಕಿಕ್ಕಿರಿದು ಸೇರಿದ್ದ ಜನರು ಕಂಬ ಎಳೆಯುವ ಸ್ಪರ್ಧೆಗೆ ಪ್ರೋತ್ಸಾಹಿಸಿದರು. ದೇವಸ್ಥಾನದ ಸಮಿತಿ ಈ ಸ್ಪರ್ಧೆಯನ್ನು ಏರ್ಪಡಿಸಿತ್ತು. ರಾಷ್ಟ್ರೀಯ ಬಿಜೆಪಿ ಕಾರ್ಯಕಾರಣಿ ಸದಸ್ಯ ಕೆ.ಟಿ. ಕುಮಾರಸ್ವಾಮಿ, ತಾಲ್ಲೂಕು ಪಂಚಾಯ್ತಿ ಶಿವಮ್ಮ ಕರಿಯಣ್ಣ ಸಂಚಾರ ಪೊಲೀಸ್‌ ಠಾಣೆ ಪಿ.ಎಸ್.ಐ ಬಸವರಾಜ ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯ್ತಿ ಭೀಮಕ್ಕ, ದೇವಸ್ಥಾನದ ಸಮಿತಿಯ ಉಪಾಧ್ಯಕ್ಷ ಓಬಳೇಶಪ್ಪ ಕಾರ್ಯದರ್ಶಿ ಬೊಮ್ಮಯ್ಯ ಸಹ ಕಾರ್ಯದರ್ಶಿ ರವಿಕುಮಾರ್, ಉಮಾಮಹೇಶ್ವರಪ್ಪ, ರವಿಚಂದ್ರ, ಬಸವಕಿರಣ ಸ್ವಾಮೀಜಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry