ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ತತ್ವ ಸಾರುವ ಸ್ತಂಭ

Last Updated 30 ಜನವರಿ 2018, 10:01 IST
ಅಕ್ಷರ ಗಾತ್ರ

ಡಂಬಳ: ಇಲ್ಲಿ ನಡೆಯಲಿರುವ ರೊಟ್ಟಿ ಜಾತ್ರೆಯ ಅಂಗವಾಗಿ ಸಿದ್ಧಲಿಂಗ ಗೆಳೆಯರ ಬಳಗ ಹಾಗೂ ತೋಂಟದಾರ್ಯ ಜೀರ್ಣೋದ್ದಾರ ಸಮಿತಿ ಪದಾಧಿಕಾರಿಗಳು, ಮಠದ ಆವರಣದಲ್ಲಿ ಷಟ್‌ಸ್ಥಲ ಸ್ತಂಭ ನಿರ್ಮಿಸಿದ್ದು, ಈ ಶಿಲೆಯಲ್ಲಿ ಲಿಂಗಾಯತ ಧರ್ಮದ ತತ್ವಗಳನ್ನು ಕೆತ್ತಲಾಗಿದೆ.

ಬೆಂಗಳೂರು, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಹಲವು ಭಾಗಗಳಲ್ಲಿ ಸಂಚರಿಸಿ, ಭಕ್ತರಿಂದ ಸಂಗ್ರಹವಾದ ಅಂದಾಜು ₹4 ಲಕ್ಷ ದೇಣಿಗೆಯಿಂದ ಗ್ರಾಮದಲ್ಲಿ ಷಟ್‌ಸ್ಥಲ ಸ್ತಂಭ ನಿರ್ಮಿಸಲಾಗಿದೆ.

ಈ ಶಿಲೆಯಲ್ಲಿ ಲಿಂಗಾಯತ ಧರ್ಮದ ತತ್ವಗಳನ್ನು ಹೊಸಪೇಟೆಯ ಶಿಲ್ಪಿ ಆರ್.ವೇಲುಮಣಿ ಆಕರ್ಷಕವಾಗಿ ಕೆತ್ತಿದ್ದಾರೆ. ಷಟ್‌ಸ್ಥಲ ಸ್ತಂಭದ ಕಲಾಶ್ರೀಮಂತಿಕೆ ನಿತ್ಯ ನೂರಾರು ಭಕ್ತರ ಗಮನ ಸೆಳೆಯುತ್ತಿದೆ.

‘ಷಟ್‌ಸ್ಥಲ ಸ್ತಂಭ ನಿಮಾರ್ಣಕ್ಕೆ ತೋಂಟದ ಶ್ರೀಗಳೇ ಪ್ರೇರಣೆ. ಉಳುವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿರುವ ಶಿಲೆಯ ಮಾದರಿಯಲ್ಲಿ ಇದನ್ನು ಕೆತ್ತಲಾಗಿದೆ. ಫೆ.1ರಂದು ಸಿದ್ಧಲಿಂಗ ಸ್ವಾಮೀಜಿ ಸ್ತಂಭ ಉದ್ಘಾಟಿಸಲಿದ್ದಾರೆ’ ಎಂದು ಮಠದ ವ್ಯವಸ್ಥಾಪಕ ಜಿ.ವಿ.ಹಿರೇಮಠ ಜಾತ್ರಾ ಸಮಿತಿ ಉಪಾಧ್ಯಕ್ಷ ಶಂಕ್ರಪ್ಪ ಎಸ್.ಗಡಗಿ ಮಾಹಿತಿ ನೀಡಿದರು. ಮಂಜುನಾಥ ಸಂಜೀವಣ್ಣನವರ ಹಾಗೂ ಬಸೀರ ಅಹ್ಮದ ತಾಂಬೋಟಿ ಇದ್ದರು.

‘ಡಂಬಳದ ರೊಟ್ಟಿ ಜಾತ್ರೆ ಇತರೆ ಜಾತ್ರೆಗಳಿಗಿಂತ ಭಿನ್ನ. ಇದು ಜನಸಾಮಾನ್ಯರ ಜಾತ್ರೆ. ಜನಜಾಗೃತಿಯೇ ಈ ಜಾತ್ರೆಯ ವಿಶೇಷ’ ಎಂದು 278ನೇ ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಕುಬೇರಪ್ಪ ಕೆ ಬಂಡಿ ಅಭಿಪ್ರಾಯಪಟ್ಟರು.

ಶಾಂತಿ ಸಭೆ: ಇಲ್ಲಿ ನಡೆಯಲಿರುವ ಜಾತ್ರಾ ಮಹೋತ್ಸವ ಮತ್ತು ಜಮಲ ಶಾವಲಿ ದರ್ಗಾದ ಉರುಸ್ ಸಂಬಂಧಿಸಿದಂತೆ ಸೋಮವಾರ ಡಂಬಳ ಗ್ರಾಮದ ಪೂಲೀಸ್ ಠಾಣೆಯ ಆವರಣದಲ್ಲಿ ಶಾಂತಿ ಸಭೆ ನಡೆಯಿತು. ಪರಸ್ಪರ ಸಾಮರಸ್ಯದಿಂದ ಕಾರ್ಯಕ್ರಮ ಆಯೋಜಿಸಬೇಕು ಎಂದು ಸಿಪಿಐ ಶ್ರೀನಿವಾಸ ಮೇಟಿ ಉಭಯ ಸಮಾಜದ ಮುಖಂಡರಲ್ಲಿ ಮನವಿ ಮಾಡಿದರು. ‘ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ’ ಅವರು ಎಚ್ಚರಿಕೆ ನೀಡಿದರು. ಮುಖಂಡ ಗೋಣಿಬಸಪ್ಪ ಕೊರ್ಲಹಳ್ಳಿ, ಮುಸ್ಲಿಂ ಸಮಾಜದ ಹಿರಿಯ ಡಿ.ಬಿ.ಡೂಲ ಮಾತನಾಡಿದರು.

ಚಂದ್ರಶೇಖರ ಗುರುವಿನ, ಮುತ್ತಣ್ಣ ಕೊಂತಿಕೊಲ್ಲ, ಕುಬೇರಪ್ಪ ಬಂಡಿ, ಬಸವರಾಜ ಪೂಜಾರ, ವಿರೂಪಾಕ್ಷಪ್ಪ ಯಲಿಗಾರ, ಮಂಜುನಾಥ ಅರವಟಿಗಿಮಠ, ದುರುಗಪ್ಪ ಮಾದರ, ಬಸಯ್ಯ ಹಿರೇಮಠ, ದೇವಪ್ಪ ತಳಗೇರಿ, ಮಂಜುನಾಥ ಸಂಜೀವಣ್ಣನವರ, ಅಶೋಕ ತಳಗೇರಿ, ರೇವಣಸಿದ್ದಪ್ಪ ಕರಿಗಾರ, ಮುರ್ತುಜಾ ಮನಿಯಾರ, ಬಸವರಾಜ ಹಮ್ಮಿಗಿ, ಯಂಕಪ್ಪ ಗಡಗಿ, ಕುಮಾರ ರಸಳಕರ, ಮಂಜುನಾಥ ಬೇವಿನಮರದ, ಎಎಸ್‍ಐ ಎಂ.ಜಿ ಹಿರೇಮಠ, ಹವಾಲ್ದಾರ ಎಸ್.ಬಿ ಹೊಸಳ್ಳಿಇದ್ದರು.

ಫೆ.1, 2ರಂದು ಜಾತ್ರೆ

ಡಂಬಳ: ಪ್ರಸಿದ್ಧ ತೋಂಟದಾರ್ಯಮಠದ 278ನೇ ಜಾತ್ರಾ ಮಹೋತ್ಸವವು ಫೆ.1, 2ರಂದು ಗ್ರಾಮದಲ್ಲಿ ನಡೆಯಲಿದೆ. ಫೆ.1ರಂದು ಬೆಳಿಗ್ಗೆ ಮದರ್ಧನಾರೀಶ್ವರ ಮಹಾ ಶಿವಯೋಗಿಗಳವರ ಗದ್ದುಗೆಗೆ ಪೂಜೆ ನಡೆಯಲಿದೆ.

ಬಸವಂತಪ್ಪ. ಮರಿಬಸಪ್ಪ. ಪಟ್ಟಣಶೆಟ್ಟಿಯವರ ಮನೆಯಿಂದ ತೋಂಟದ ಶ್ರೀಗಳು ಹೊರಟು, ಶಿಲೆಯಲ್ಲಿ ನಿರ್ಮಿಸಿದ ಷಟ್‌ಸ್ಥಲ ಸ್ತಂಭ ದ ಉದ್ಘಾಟನೆ ಮಾಡುವರು. ಸಂಜೆ 6:30ಕ್ಕೆ ರಥೋತ್ಸವ ನಡೆಯಲಿದೆ. ರಾತ್ರಿ 8ಗಂಟೆಗೆ ಸಿದ್ದಲಿಂಗ ಸ್ವಾಮೀಜಿ ಆರ್ಶೀವಚನ ನೀಡಲಿದ್ದಾರೆ.

ಶಾಸಕ ಜಿ.ಎಸ್.ಪಾಟೀಲ, ರಾಮಕೃಷ್ಣ ದೊಡ್ಡಮನಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಾಸಣ್ಣ ಕುರಡಗಿ, ಎಸ್.ಎಸ್.ಪಾಟೀಲ, ರೇಣುಕಾ ಗೋಣಿಬಸಪ್ಪ ಕೋರ್ಲಹಳ್ಳಿ ಭಾಗವಹಿಸುವರು. ಫೆ.2ರಂದು ಮಲ್ಲಪ್ಪ ಚನ್ನಪ್ಪ ಪ್ಯಾಟಿ ಅವರ ಮನೆಯಿಂದ ತೋಂಟದ ಶ್ರೀಗಳು ಹೊರಡುವರು. ಸಂಜೆ 6:30ಕ್ಕೆ ಲಘು ರಥೋತ್ಸವ ನಡೆಯಲಿದೆ.

ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಕಳಕಪ್ಪ ಬಂಡಿ, ಶಕುಂತಲಾ.ಆರ್ ಚವ್ಹಾಣ, ಬಸವರಾಜ ಗಂಗಾವತಿ ಭಾಗವಹಿಸುವರು.

ಲಕ್ಷಣ ಎಚ್‌.ದೊಡ್ಡಮನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT