ಕಾಂಗ್ರೆಸ್‌ಗೆ ಬಿಜೆಪಿ ಮುಖಂಡರು ಸೇರ್ಪಡೆ

7

ಕಾಂಗ್ರೆಸ್‌ಗೆ ಬಿಜೆಪಿ ಮುಖಂಡರು ಸೇರ್ಪಡೆ

Published:
Updated:

ಶಿಗ್ಗಾವಿ: ಪಟ್ಟಣದಲ್ಲಿ ಭಾನುವಾರ ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಸೈಯದ್‌ ಅಜ್ಜಂಪೀರ್‌ ಖಾದ್ರಿ ಅವರ ನೇತೃತ್ವದಲ್ಲಿ ಶೀಲವಂತ ಸೋಮಾಪುರ ಗ್ರಾಮದ ಕೆಲವು ಬಿಜೆಪಿ ಮುಖಂಡರು ಕಾಂಗ್ರೆಸ್‌ ಸೇರ್ಪಡೆಯಾದರು.

ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಸೈಯದ್‌ ಅಜ್ಜಂಪೀರ್‌ ಖಾದ್ರಿ ಅವರು ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಯ್ಯ ಅವರ ಅಭಿವೃದ್ಧಿ, ಜನಪರ ಕಾಳಜಿ ಹಾಗೂ ಹಗರಣ ರಹಿತ ಆಡಳಿತವನ್ನು ಮೆಚ್ಚಿ ಅನೇಕರು ಕಂಗ್ರೆಸ್‌ ಪಕ್ಷ ಸೇರುತ್ತಿದ್ದಾರೆ. ಇದರಿಂದಾಗಿ ಪಕ್ಷ ಬಲ ಹೆಚ್ಚುತ್ತಿದೆ’ ಎಂದು ಹೇಳಿದರು.

ಶೀಲವಂತ ಸೋಮಾಪುರ ಗ್ರಾಮದ ಪ್ರವೀಣ ಹರಕುಣಿ, ಶಿವಪ್ಪ ಹರಕುಣಿ, ಮಲ್ಲಿಕಾರ್ಜುನ ಹುಬ್ಬಳ್ಳಿ, ನೀಲಕಂಠಪ್ಪ ಹುಬ್ಬಳ್ಳಿ, ಪ್ರದೀಪ ಹರಕುಣಿ, ರಾಯಪ್ಪ ಭದ್ರಶೆಟ್ಟಿ, ಬಸವರಾಜ ಹರಕುಣಿ, ಶಂಕ್ರಪ್ಪ ಕೊಪ್ಪದ, ಶಾಂತಪ್ಪ ಹರಕುಣಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದರು. ಜಿಲ್ಲಾ ಪಂಚಾಯ್ತಿ ಸದಸ್ಯ ಬಸನಗೌಡ ದೇಸಾಯಿ, ಕಾಂಗ್ರೆಸ್‌ ಜಿಲ್ಲಾ ಎಸ್‌ಸಿ ಘಟಕದ ಅಧ್ಯಕ್ಷ ಎಸ್‌.ಎಫ್‌. ಮಣಕಟ್ಟಿ, ಭುಜಂಗ ಸಾಗರಶೆಟ್ಟರ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry