‘ಮತಾಂಧನಿಂದ ಮಹಾತ್ಮ ಗಾಂಧಿ ಹತ್ಯೆ’: ವಿಶ್ವದ ಹಲವು ‍ಪತ್ರಿಕೆಗಳ ಮುಖಪುಟದಲ್ಲಿ ಗಾಂಧೀಜಿ

7

‘ಮತಾಂಧನಿಂದ ಮಹಾತ್ಮ ಗಾಂಧಿ ಹತ್ಯೆ’: ವಿಶ್ವದ ಹಲವು ‍ಪತ್ರಿಕೆಗಳ ಮುಖಪುಟದಲ್ಲಿ ಗಾಂಧೀಜಿ

Published:
Updated:
‘ಮತಾಂಧನಿಂದ ಮಹಾತ್ಮ ಗಾಂಧಿ ಹತ್ಯೆ’: ವಿಶ್ವದ ಹಲವು ‍ಪತ್ರಿಕೆಗಳ ಮುಖಪುಟದಲ್ಲಿ ಗಾಂಧೀಜಿ

ಬೆಂಗಳೂರು: 70 ವರ್ಷಗಳ ಹಿಂದೆ ಈ ದಿನ ಬಿರ್ಲಾ ಹೌಸ್‌ನಲ್ಲಿ ಪ್ರಾರ್ಥನೆಗಾಗಿ ತೆರಳುತ್ತಿದ್ದ ಮಹಾತ್ಮ ಗಾಂಧಿಯ ಹತ್ಯೆಯಾಯಿತು.

ಗಾಂಧೀಜಿ ಕೊಲೆ ಇಡೀ ಜಗತ್ತನ್ನು ಬೆಚ್ಚಿ ಬೀಳಿಸಿತ್ತು. ವಿಶ್ವವೇ ಸಂತಾಪ ಸೂಚಿಸಿತು, ಎಲ್ಲ ರಾಷ್ಟ್ರಗಳ ಪತ್ರಿಕೆಗಳು ಮಹಾತ್ಮ ಗಾಂಧಿ ಹತ್ಯೆ ಸುದ್ದಿಯನ್ನು ಮುಖಪುಟದಲ್ಲಿ ಪ್ರಕಟಿಸಿದವು.

ಅಮೆರಿಕದ ದಿ ರಸ್ಸೆಲ್‌ ಕೌಂಟಿ ನ್ಯೂಸ್‌ ಪತ್ರಿಕೆ ಮತಾಂಧನಿಂದ ಮೋಹನ್‌ದಾಸ್‌ ಕೆ.ಗಾಂಧಿ ಹತ್ಯೆ ತಲೆಬರಹದೊಂದಿಗೆ ಸುದ್ದಿ ಪ್ರಕಟಿಸಿತು. ಹಿಂದೂ ಒಬ್ಬನಿಂದ ಗಾಂಧಿ ಕೊಲೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ಬರೆಯಿತು.

ಎಂ.ಕೆ.ಗಾಂಧಿ ಕೊಲೆ(ಲಾಸ್‌ ಏಂಜಲೀಸ್‌ ಎಗ್ಸಾಮಿನರ್‌ ಪತ್ರಿಕೆ), ಹಂತಕನ ಗುಂಡಿಗೆ ಮಹಾತ್ಮ ಗಾಂಧಿ ಹುತಾತ್ಮ(ಡಾನ್‌ ಪತ್ರಿಕೆ), ಭಾರತದಲ್ಲಿ ಗಾಂಧಿ ಹತ್ಯೆ(ದಿ ಸನ್‌), ಪ್ರಾರ್ಥನೆಗೆ ತೆರಳುವ ವೇಳೆ ಗುಂಡೇಟಿಗೆ ಮಹಾತ್ಮ ಗಾಂಧಿ ಸಾವು(ದಿ ಐರಿಷ್‌ ಟೈಮ್ಸ್‌), ಗಾಂಧಿ ಹತ್ಯೆ; ಮುಂಬೈ ಗಲಭೆಯಲ್ಲಿ 15 ಸಾವು(ದಿ ವಾಷಿಂಗ್ಟನ್‌ ಪೋಸ್ಟ್‌),...

ರಾಷ್ಟ್ರಪಿತ ಗಾಂಧೀಜಿ ಹತ್ಯೆಗೆ ಕಾರಣರಾದ ನಾಥೂರಾಂ ಗೋಡ್ಸೆ ಹಾಗೂ ನಾರಾಯಣ ಆಪ್ಟೆಯನ್ನು 1949ರ ನ.15ರಂದು ಗಲ್ಲಿಗೇರಿಸಲಾಯಿತು.

(ಫೋಟೋ ಕೃಪೆ: ಔಟ್‌ಲುಕ್‌ ಇಂಡಿಯಾ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry