ಸೌಹಾರ್ದತೆಗಾಗಿ ಮಾನವ ಸರಪಳಿ

7

ಸೌಹಾರ್ದತೆಗಾಗಿ ಮಾನವ ಸರಪಳಿ

Published:
Updated:
ಸೌಹಾರ್ದತೆಗಾಗಿ ಮಾನವ ಸರಪಳಿ

ಮೈಸೂರು: ಸೌಹಾರ್ದತೆಗಾಗಿ ಕರ್ನಾಟಕ ಸಂಘಟನೆ ಏರ್ಪಡಿಸಿದ್ದ ಮಾನವ ಸರಪಳಿಯಲ್ಲಿ ಮಂಗಳವಾರ ಸಾಹಿತಿ ದೇವನೂರ ಮಹಾದೇವ ಸೇರಿದಂತೆ ಪ್ರಗತಿಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ನಟ ಪ್ರಕಾಶ್ ರೈ, ಸಾಹಿತಿ ರಹಮತ್ ತರೀಕೆರೆ, ಕೆ.ಎಸ್.ಭಗವಾನ್, ರಂಗಕರ್ಮಿಗಳಾದ ಜನಾರ್ದನ್, ರಾಮೇಶ್ವರಿವರ್ಮಾ, ಮಂಡ್ಯ ರಮೇಶ್, ನಂದಾ ಹಳೇಮನೆ,  ಮುಖಂಡರಾದ ಬಡಗಲಪುರ ನಾಗೇಂದ್ರ, ಪ್ರೊ.ಮುಜಾಫರ್ ಅಸ್ಸಾದಿ, ಹೋರಾಟಗಾರ ಪ.ಮಲ್ಲೇಶ್ ಭಾಗಿಯಾದರು.

ಕೋಟೆ ಆಂಜನೇಯಸ್ವಾಮಿ ದೇಗುಲದಿಂದ ಆರಂಭವಾದ ಮಾನವ ಸರಪಳಿ ಆಜ್ಜಮ್ ಮಸೀದಿವರೆಗೆ ಸುಮಾರು 2 ಕಿ.ಮೀ ದೂರದವರೆಗೆ ರಚಿಸಲಾಗಿದೆ.

ಶಾಲಾ–ಕಾಲೇಜು ವಿದ್ಯಾರ್ಥಿಗಳು ಭಾಗಿ

ಮಂಗಳೂರು:
ಸೌಹಾರ್ದತೆಗಾಗಿ ಮಾನವ ಸರಪಳಿ ಕಾರ್ಯಕ್ರಮ ಆರಂಭವಾಗಿದ್ದು, ಇಲ್ಲಿನ ನೆಹರೂ ಮೈದಾನ ಮತ್ತು ಪುರಭವನವನ್ನು  ಮಾನವ ಸರಪಳಿ ಸುತ್ತುವರಿದಿದೆ.

(ವಿವಿಧ ಸಂಘಟನೆಗಳ ಸದಸ್ಯರು ಮತ್ತು ಶಾಲಾ‌, ಕಾಲೇಜು ವಿದ್ಯಾರ್ಥಿಗಳು ಭಾಗಿಯಾದರು)

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘ ಪರಿವಾರದ ಕಾಲಾಳುಗಳಾಗಿ ಹಿಂಸೆ ನಡೆಸುತ್ತಿರುವ ಮತ್ತು ಹಿಂಸೆಗೆ ಬಲಿಯಾಗುತ್ತಿರುವ ಕೆಳ ಸಮುದಾಯಗಳ ಯುವಕರ ‌ಮೆದುಳನ್ನು ಶುದ್ಧೀಕರಣ ಮಾಡಬೇಕಿದೆ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಹೇಳಿದರು. ಮಾನವ ಸರಪಳಿ ಸಾರ್ವಜನಿಕ ಸಭೆಯಲ್ಲಿ ಪ್ರಧಾನ ಭಾಷಣ ಮಾಡಿದರು.

ಹಿಂಸೆ ನಡೆಸುವ ಕೈಗಳನ್ನು ಗುರುತಿಸುವ‌ ಮೊದಲು ಸೂತ್ರಧಾರಿಗಳ ಮೆದುಳುಗಳನ್ನು ಪತ್ತೆ ಮಾಡಬೇಕು.

'ಕುದ್ರೋಳಿ ಗೋಕರ್ಣನಾಥ ದೇವಸ್ಥಾನಕ್ಕೆ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಕರೆ ತಂದಿರುವುದು ನಾರಾಯಣ ಗುರುಗಳಿಗೆ ಮಾಡಿದ ಅವಮಾನ' ಎಂದರು.

ಮಂಡ್ಯ: ಸಾಮರಸ್ಯಕ್ಕಾಗಿ ಮಾನವ ಸರಪಳಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry