ಪ್ರಜಾವಾಣಿ ಕ್ವಿಜ್ 7

6

ಪ್ರಜಾವಾಣಿ ಕ್ವಿಜ್ 7

Published:
Updated:
ಪ್ರಜಾವಾಣಿ ಕ್ವಿಜ್ 7

1.ಡಯಾಲಿಸಿಸ್ ಅನ್ನು ಯಾವುದರ ಚಿಕಿತ್ಸೆಗೆ ಬಳಸುತ್ತಾರೆ?

ಅ) ಮೆದುಳಿನ ಕಾಯಿಲೆ ಆ) ಕಿಡ್ನಿ ಸಮಸ್ಯೆ ಇ) ಕಣ್ಣಿನ ತೊಂದರೆ ಈ) ಶ್ವಾಸಕೋಶದ ಸಮಸ್ಯೆ

2. ಇವುಗಳಲ್ಲಿ ಕುದುರೆ ಸಾಕಾಣಿಕೆಗೆ ಪ್ರಸಿದ್ಧವಾದ ಊರು ಯಾವುದು?

ಅ) ಕೋಲಾರ ಆ) ಬನ್ನೂರು ಇ) ಕುಣಿಗಲ್ ಈ) ತುಮಕೂರು

3. ಭಾರತದ ಪ್ರಥಮ ದಂಡನಾಯಕರಾಗಿದ್ದ ಕರ್ನಾಟಕದ ವ್ಯಕ್ತಿ ಯಾರು?

ಅ) ಜನರಲ್ ತಿಮ್ಮಯ್ಯ ಆ) ಜನರಲ್ ಮಣೆಕ್ ಷಾ ಇ) ಜನರಲ್ ನಾಯಕ್ ಈ) ಜನರಲ್ ಕಾರಿಯಪ್ಪ

4. ಬಿ.ಜಿ.ಎಲ್. ಸ್ವಾಮಿ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ?

ಅ) ಅಮೆರಿಕದಲ್ಲಿ ನಾನು ಆ) ಪಂಚ ಕಲಶ ಗೋಪುರ ಇ) ಫಲಶ್ರುತಿ ಈ) ಹಸುರು ಹೊನ್ನು

5. ಕೆಳಗಿನವರಲ್ಲಿ ಪಾಜಕದಲ್ಲಿ ಜನಿಸಿದವರು ಯಾರು?

ಅ) ಮಧ್ವಾಚಾರ್ಯರು ಆ) ವಾದಿರಾಜರು ಇ) ಜಯತೀರ್ಥರು ಈ) ರಾಘವೇಂದ್ರರು

6. ನೆಲ್ಸನ್ ಮಂಡೇಲಾ ಯಾವ ದೇಶದವರು?

ಅ) ಕೀನ್ಯಾ ಆ) ಉಗಾಂಡ ಇ) ನೈಜೀರಿಯಾ ಈ) ದಕ್ಷಿಣ ಆಫ್ರಿಕಾ

7. ಬಿಥೊವನ್ ಯಾವ ಕ್ಷೇತ್ರದ ಪ್ರಸಿದ್ಧ ವ್ಯಕ್ತಿ?

ಅ) ಕರ್ನಾಟಕ ಸಂಗೀತ ಆ) ಪಾಶ್ಚಾತ್ಯ ಸಂಗೀತ ಇ) ಹಿಂದೂಸ್ತಾನಿ ಸಂಗೀತ ಈ) ಜನಪದ ಸಂಗೀತ

8. ಈ ಯಾವ ರಾಜ್ಯದಲ್ಲಿ ಭತ್ತವನ್ನು ಬೆಳೆಯುವುದಿಲ್ಲ?

ಅ) ಮಿಜೋರಾಂ ಆ) ಉತ್ತರ ಪ್ರದೇಶ ಇ) ಆಂಧ್ರ ಈ) ಬಿಹಾರ

9. ಬಿಳಿ ಬಾವುಟ ಯಾವುದರ ಸಂಕೇತವಾಗಿದೆ ?

ಅ) ಪ್ರತಿಭಟನೆ ಆ) ಕ್ರಾಂತಿ ಇ) ಶರಣಾಗತಿ ಈ) ದಾರಿ ಸುಗಮವಾಗಿದೆ

10. ಕೇಸರಿಯನ್ನು ಈ ಯಾವ ರಾಜ್ಯದಲ್ಲಿ ಹೆಚ್ಚು ಬೆಳೆಯುತ್ತಾರೆ?

ಅ) ಮೇಘಾಲಯ ಆ) ಜಮ್ಮು-ಕಾಶ್ಮೀರ ಇ) ಮಿಜೋರಾಂ ಈ) ಅರುಣಾಚಲ ಪ್ರದೇಶ

ಹಿಂದಿನ ಸಂಚಿಕೆಯ ಸರಿಯುತ್ತರಗಳು: 1. ಇ) ರಾಘವ, 2. ಅ) ಜ. ಬಿಪಿನ್ ರಾವತ್, 3. ಆ) ಬಸವರಾಜ ರಾಯರೆಡ್ಡಿ, 4. ಆ) ಜನವರಿ 15 ,5. ಇ) ಯಕ್ಷಗಾನ, 6. ಅ) ಕದಿಯುವ ಚಟ, 7. ಆ) ಕೆಳದಿ, 8. ಈ) ಕ್ಯಾಂಟರ್‍ಬರಿ ಟೇಲ್ಸ್, 9. ಅ) ಜಿ.ಎಚ್. ಹಾರ್ಡಿ, 10. ಈ) ಭೀಷ್ಮ ಸಹಾನಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry