ಪ್ರೀತಿ ನಿಜನಾ...

7

ಪ್ರೀತಿ ನಿಜನಾ...

Published:
Updated:
ಪ್ರೀತಿ ನಿಜನಾ...

ರಾಕುಲ್‌ ಪ್ರೀತ್‌ ಸಿಂಗ್‌ ಮತ್ತು ರಾನಾ ದಗ್ಗುಬಾಟಿ ಪ್ರೀತಿಯ ಅಲೆಯಲ್ಲಿ ತೇಲುತ್ತಿದ್ದಾರೆ. ಇಬ್ಬರೂ ಡೇಟಿಂಗ್‌ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂಬ ಸುದ್ದಿ ಟಾಲಿವುಡ್‌ ಗಲ್ಲಿಯಲ್ಲಿ ಹರಿದಾಡುತ್ತಿತ್ತು. ಇಲ್ಲಿಯವರೆಗೂ ಮೌನವಾಗಿದ್ದ ರಾಕುಲ್‌ ಈಗ ತಮ್ಮಿಬ್ಬರ ನಡುವಿನ ಸಂಬಂಧವನ್ನು ಬಹಿರಂಗಪಡಿಸಿದ್ದಾರೆ.

‘ನಮ್ಮಿಬ್ಬರ ನಡುವೆ ಪ್ರೀತಿ ಇರುವುದು ನಿಜ. ಆದರೆ ಅದು ಸ್ನೇಹದ ಪ್ರೀತಿ. ನಾನು ರಾನಾ ಇಬ್ಬರೂ ಒಳ್ಳೆಯ ಗೆಳೆಯರು. ತುಂಬಾ ದಿನಗಳಿಂದ ನಾವಿಬ್ಬರೂ ಪ್ರೀತಿಸುತ್ತಿದ್ದೇವೆ ಎಂಬ ಸುದ್ದಿಯಿದೆ. ಇದನ್ನು ಕೇಳಿದಾಗ ನಮಗೆ ನಗು ಬರುತ್ತದೆ. ನಾನು ವೃತ್ತಿಯ ಕಾರಣಕ್ಕೆ ಕುಟುಂಬದಿಂದ ದೂರಾಗಿ ಹೈದರಾಬಾದ್‌ನಲ್ಲಿ ನೆಲೆಸಿದ್ದೇನೆ. ನನಗೆ ಒಂಟಿ ಎನಿಸಿದ ಗಳಿಗೆಯಲ್ಲಿ ಅವನು ನನ್ನ ಜೊತೆಯಾಗಿದ್ದಾನೆ. ನನ್ನದೊಂದು ದೊಡ್ಡ ಗೆಳೆಯರ ಗುಂಪಿದೆ. ಅದರಲ್ಲಿ ರಾನಾ ಕೂಡ ಒಬ್ಬ’ ಎಂದಿದ್ದಾರೆ ರಾಕುಲ್‌.

‘ಸದ್ಯಕ್ಕಂತೂ ನಾನು ಒಂಟಿ. ಹಾಗೊಮ್ಮೆ ಪ್ರೀತಿ ಮೂಡಿದರೂ, ಅದನ್ನು ಬಚ್ಚಿಡುವುದಿಲ್ಲ. ಧೈರ್ಯವಾಗಿಯೇ ಎಲ್ಲರೊಂದಿಗೆ ಹಂಚಿಕೊಳ್ಳುವೆ’ ಎನ್ನುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಸದ್ಯ ರಾಕುಲ್‌ ‘ಅಯ್ಯಾರಿ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿದ್ಧಾರ್ಥ ಮಲ್ಹೋತ್ರ ಈ ಸಿನಿಮಾದ ನಾಯಕ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry