‘ವಯಸ್ಸಾದ’ ರೂಪದರ್ಶಿಯರು

7

‘ವಯಸ್ಸಾದ’ ರೂಪದರ್ಶಿಯರು

Published:
Updated:
‘ವಯಸ್ಸಾದ’ ರೂಪದರ್ಶಿಯರು

ರೂಪದರ್ಶಿಯರು ಎಂದಾಕ್ಷಣ ಕಣ್ಣಮುಂದೆ ಬರುವುದು 35 ಗಡಿ ದಾಟದ ಚೆಲುವ, ಚೆಲುವೆಯರು. ಮುಖದಲ್ಲಿ ನೆರಿಗೆ ಮೂಡುತ್ತಿದ್ದಂತೆ ಮಾಡೆಲಿಂಗ್‌ ಕ್ಷೇತ್ರದಲ್ಲಿ ಅವಕಾಶ ಕೊರತೆ ಎದುರಿಸಬೇಕಾಗುತ್ತದೆ. ವಯಸ್ಸಾದ ಮೇಲೆ ವೇದಿಕೆ ಏರಿ ಮಾರ್ಜಾಲ ನಡಿಗೆ ನಡೆಯಬೇಕು ಎಂಬ ಹಲವರ ಕನಸಿಕೆ ಅವಕಾಶ ಸಿಗುವುದೇ ಇಲ್ಲ.

ಮಾಡೆಲಿಂಗ್‌ ಕ್ಷೇತ್ರದ ಈ ಸಿದ್ಧ ಸೂತ್ರಕ್ಕೆ ಸಡ್ಡು ಹೊಡೆದು ಸೈ ಎನಿಸಿಕೊಂಡಿದೆ ರಷ್ಯಾದ ಓಲ್ಡುಷ್ಕಾ ಮಾಡೆಲಿಂಗ್‌ ಏಜೆನ್ಸಿ. ರೂಪದರ್ಶಿ ಆಗಬೇಕೆಂಬ ಕನಸು ಹೊಂದಿದ್ದ 46 ರಿಂದ 86 ಪ್ರಾಯದ ಸುಮಾರು 20 ಮಂದಿಯನ್ನು ಆರಿಸಿ, ಅವರಿಗೆ ಗ್ರೂಮಿಂಗ್‌ ಮಾಡಿದೆ ಈ ಕಂಪೆನಿ.

ವಯಸ್ಸಾದರೇನಂತೆ ನಮ್ಮ ಉತ್ಸಾಹಕ್ಕೇನೂ ಕಡಿಮೆಯಿಲ್ಲ ಎಂದು ಬೀಗಿರುವ ಈ ರೂಪದರ್ಶಿಗಳು ಹಲವು ನಿಯತಕಾಲಿಕೆ ಮತ್ತು ಫ್ಯಾಷನ್‌ ಬ್ಲಾಗ್‌ಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry