ಮರಳಿನ ಅರಮನೆ

7

ಮರಳಿನ ಅರಮನೆ

Published:
Updated:
ಮರಳಿನ ಅರಮನೆ

ಸಮುದ್ರದ ಕಿನಾರೆ ಬಳಿ ಮನೆಯ ಮಾಡಿ ಮುಳುಗೇಳುವ ಅಲೆಗಳನ್ನು ಆಸ್ವಾದಿಸುವ ಹಂಬಲ ಹಲವರದ್ದು. ಹೀಗೆ ಸಮುದ್ರದ ಸೌಂದರ್ಯಕ್ಕೆ ಮರುಳಾದ ವ್ಯಕ್ತಿಯೊಬ್ಬರು 22 ವರ್ಷಗಳಿಂದ ಸಮುದ್ರದಂಡೆಯಲ್ಲಿ ಮನೆ ನಿರ್ಮಿಸಿಕೊಂಡು ಬದುಕುತ್ತಿದ್ದಾರೆ. ಇದರಲ್ಲೇನು ವಿಶೇಷ ಅಂತಿರಾ. ಇದು ಸಿಮೆಂಟ್‌, ಇಟ್ಟಿಗೆಗಳಿಂದ ನಿರ್ಮಿಸಿರುವ ಮನೆಯಲ್ಲ. ಮರಳಿನಿಂದ ಕಟ್ಟಿರುವ ಅರಮನೆ!

ಇಂತಹ ಮರಳಿನ ಮನೆಯಿಂದಾಗಿ ಸುದ್ದಿಯಾಗಿರುವವರು ಬ್ರೆಜಿಲ್‌ನ ಮ್ಯಾರ‍್ಷಿಯೊ ಮಿಜೆಲ್‌. ಇವರು ಬ್ರಹ್ಮಚಾರಿ. ಬದುಕನ್ನು ತುಂಬಾ ಪ್ರೀತಿಸುವ ಇವರು, ಪ್ರವಾಸಿಗರ ಪ್ರಮುಖ ಆಕರ್ಷಣೆ. ಒಮ್ಮೆ ಬಿದ್ದ ಅರಮನೆಯನ್ನು ಮತ್ತೆ ಕಟ್ಟುವ ಚಾಣಾಕ್ಷತೆಯೂ ಇವರದು. ತಲೆಗೊಂದು ಕಿರೀಟ ಇರಿಸಿಕೊಂಡಿರುವ ಇವರ ವರ್ತನೆ ಥೇಟ್‌ ರಾಜನ ರೀತಿಯಲ್ಲಿಯೇ ಇರುತ್ತದೆ. ಸ್ಥಳೀಯರು ಇವರನ್ನು ‘ದಿ ಕಿಂಗ್‌’ ಎಂದೇ ಕರೆಯುತ್ತಾರೆ. ಬ್ರೆಜಿಲ್‌ನ ಬರ‍್ರಾ ಡ ತಿಜುಕಾ ಸಮುದ್ರದಲ್ಲಿ ಇವರ ಅರಮನೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry