ರೋಬೊ ಲೋಕದಲ್ಲಿ ಹೊಸ ಅಚ್ಚರಿಗಳು...

7

ರೋಬೊ ಲೋಕದಲ್ಲಿ ಹೊಸ ಅಚ್ಚರಿಗಳು...

Published:
Updated:
ರೋಬೊ ಲೋಕದಲ್ಲಿ ಹೊಸ ಅಚ್ಚರಿಗಳು...

ರೋಬೊಟ್‌ಗಳ ಲೋಕವೇ ವಿಸ್ಮಯ. ಅವುಗಳ ಕುರಿತು ಸಂಶೋಧನೆ ಸದಾ ಕಾಲವೂ ನಡೆಯುತ್ತಲೇ ಇರುತ್ತದೆ. ಹೊಸ ವರ್ಷದ ಆರಂಭದಲ್ಲೇ ಅಮೆರಿಕದ ನೆವಾಡದ ಲಾಸ್‌ ವೆಗಸ್‌ನಲ್ಲಿ ನಡೆದ ಕನ್ಸೂಮರ್‌ ಎಲೆಕ್ಟ್ರಾನಿಕ್‌ ಷೊನಲ್ಲಿ (ಸಿಇಎಸ್‌ 2018) ಸಹ ಹಲವು ವಿಶೇಷಗಳನ್ನು ಒಳಗೊಂಡ ರೋಬೊಟ್‌ಗಳು ಪ್ರದರ್ಶನಕ್ಕಿದ್ದವು. ವಿಶ್ವದ ವಿವಿಧ ಭಾಗದ ಸಂಶೋಧಕರಿಂದ ತಯಾರಾದ ಇವುಗಳು ವೀಕ್ಷಕರನ್ನು ಸೆಳೆದವು. ಅವುಗಳಲ್ಲಿ ಕೆಲವು ರೋಬೊಟ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ.

ಸ್ಯಾನ್‌ಬೋಟ್‌ ಸರ್ವಿಸ್‌ ರೋಬೊಟ್‌ ಸ್ಯಾನ್‌ಬೋಟ್‌ ಬುದ್ಧಿವಂತ, ಕ್ಲೌಡ್‌ ಎನೆಬಲ್ಡ್‌ ಸರ್ವಿಸ್‌ ರೋಬೊಟ್‌. ಇದನ್ನು ಚೀನಾದ ಒಹಿಯಾನ್‌ ಟೆಕ್ನಾಲಜಿ ಕಂಪನಿ ಸಿದ್ಧಪಡಿಸಿದೆ. ರೋಬೊಟಿಕ್ಸ್‌ ಮತ್ತು ಕೃತಕಬುದ್ಧಿಮತ್ತೆಯ ಮುಖ್ಯಕಚೇರಿ ಇರುವ ಶೆನ್‌ಜೆನ್‌ನಲ್ಲಿ ಇದನ್ನು ರೂಪಿಸಲಾಗಿದೆ. ಸ್ಯಾನ್‌ಬೋಟ್‌ ಬ್ರ್ಯಾಂಡ್‌ನಲ್ಲಿ ಒಹಿಯಾನ್ ಮೂರು ತಲೆಮಾರಿನ ಬುದ್ಧಿವಂತ ರೋಬೊಟ್‌ಗಳನ್ನು ತಯಾರು ಮಾಡಿದೆ. ಇವುಗಳಿಗೆ ಸ್ಯಾನ್‌ಬೋಟ್‌ ಎ‌ಲ್ಫ್‌(4), ಸ್ಯಾನ್‌ಬೋಟ್‌ ಕಿಂಗ್‌ ಕಾಂಗ್ (5) ಮತ್ತು ಸ್ಯಾನ್‌ಬೋಟ್‌ ನ್ಯಾನೊ ಎಂದು ಹೆಸರಿಡಲಾಗಿದೆ.

ಕಿರಾಣಿ ಅಂಗಡಿ, ಆಸ್ಪತ್ರೆ, ವಿಮಾನ ನಿಲ್ದಾಣ, ಶಿಕ್ಷಣ ಸಂಸ್ಥೆ ಮತ್ತು ಭದ್ರತಾ ಉದ್ದೇಶಗಳಿಗೆ ಬಳಸಬಹುದಾದ ಈ ರೋಬೊಟ್‌ ಅನ್ನು ಮೊದಲ ಬಾರಿಗೆ ಬರ್ಲಿನ್‌ನಲ್ಲಿ 2016 ರಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಸ್ಯಾನ್‌ಬೋಟ್‌ ಎಲ್ಫ್‌ ಅನ್ನು ಈಗಾಗಲೇ ವಿಮಾನ ನಿಲ್ದಾಣಗಳು ಮತ್ತು ಬಂದರುಗಳಲ್ಲಿ ಬಳಸಲಾಗುತ್ತಿದೆ. ಪ್ರಯಾಣಿಕರ ಸೇವೆ ಮತ್ತು ಭದ್ರತಾ ಕೆಲಸಗಳನ್ನು ಇದು ಮಾಡುತ್ತಿದೆ. ಒಹಿಯಾನ್‌ ಟೆಕ್ನಾಲಜಿ ಸ್ಯಾನ್‌ಬೋಡ್‌ ಕಿಂಗ್ ಕಾಂಗ್ ಅನ್ನು ಕಳೆದ ವರ್ಷ ಬೀಜಿಂಗ್‌ನಲ್ಲಿ ನಡೆದ ವಿಶ್ವ ರೋಬೊಟ್‌ ಶೃಂಗಸಭೆಯಲ್ಲಿ ಪ್ರದರ್ಶನಕ್ಕಿಟ್ಟಿತ್ತು. ಇದೀಗ ಲಾಸ್ ವೇಗಸ್‌ ಸಿಇಎಸ್‌ಗೂ ಬಂದಿದೆ.

ನೃತ್ಯದಿಂದ ಗಮನಸೆಳೆದ ರೋಬೊಟಿಕ್ಸ್: ಕಳೆದ ಹಲವಾರು ವರ್ಷಗಳಿಂದ ಟೆಹರಾನ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ದೊಡ್ಡ ಮತ್ತು ಸಂಕೀರ್ಣವಾದ ದೊಡ್ಡ ದೊಡ್ಡ ಹ್ಯೂಮನಾಯ್ಡ್‌ ರೋಬೊಟ್‌ಗಳನ್ನು ತಯಾರು ಮಾಡುವಲ್ಲಿ ತೊಡಗಿದ್ದರು. ಇತ್ತೀಚೆಗೆ ಅವರು ಸಣ್ಣ ಗಾತ್ರದ ಸುಂದರವಾದ ರೋಬೊಟ್‌ಗಳನ್ನು ತಯಾರು ಮಾಡಿದ್ದಾರೆ. ಅವುಗಳೇ ಮಿನಿ ರೋಬೊಟ್‌ಗಳು.  3ಡಿ ಪ್ರಿಂಟರ್‌ ದೇಹ ಹೊಂದಿರುವ  ಇವುಗಳು ಕೃತಕ ಅಂಗಾಂಗದ ಜತೆ ಪೂರ್ಣ ತಿರುಗುವ ತಲೆ ಹೊಂದಿವೆ. ಇದರಲ್ಲಿ ಎರಡು ಕ್ಯಾಮೆರಾಗಳಿವೆ. ಸ್ವಲ್ಪ ದೂರ ನಡೆಯುವ ಇವುಗಳು ಸನ್ನೆ ಹಾಗೂ ನೃತ್ಯ ಮಾಡುತ್ತವೆ.

‘ಈ ರೋಬೊಟ್‌ಗಳನ್ನು ರೂಪಿಸಿದ ಪ್ರಮುಖ ಉದ್ದೇಶ ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ರೋಬೊಟಿಕ್‌ ಅನುಭವ ನೀಡಲು’ ಎನ್ನತ್ತಾರೆ ಟೆಹರಾನ್‌ ವಿಶ್ವವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ ವಿಭಾಗದ  ಪ್ರಾಧ್ಯಾಪಕ ಅಗ್‌ಹಿಲ್‌ ಯೋಸುಫಿ. ಈ ವಿವಿಯ 15 ಸಂಶೋಧಕರು ಸುರೇನಾ ಮಿನಿ ಎಂಬ ಹೆಸರಿನ ರೋಬೊಟ್‌ ರೂಪಿಸಲು ಒಂದು ವರ್ಷಕ್ಕೂ ಹೆಚ್ಚು ಕಾಲ ಶ್ರಮ ಹಾಕಿದ್ದಾರೆ. 50 ಸೆಂಟಿ ಮೀಟರ್‌ ಎತ್ತರ ಮತ್ತು 3.4 ಕೆ.ಜಿ ತೂಕವಿದೆ.

ಸ್ಟಾರ್ಮ್‌ ಟ್ರೂಪರ್ ರೋಬೊಟ್ಸ್‌: 2012 ರಲ್ಲಿ ಆರಂಭವಾದ UBTECH ಹೆಸರಿನ ಕಂಪನಿ ಸ್ಟಾರ್ಮ್‌ ಟ್ರೂಪರ್ ರೋಬೊಟ್ಸ್‌ಗಳನ್ನು ತಯಾರು ಮಾಡಿದೆ. ಜಾಗತಿಕ ಮಟ್ಟದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಇದು ಕೃತಕ ಬುದ್ಧಿಮತ್ತೆ ಮತ್ತು ಹ್ಯೂಮನಾಯ್ಡ್‌ ರೋಬೊಟಿಕ್‌ ಕಂಪನಿ. 2008ರಿಂದ ಇದು ಗ್ರಾಹಕರಿಗೆ ಅನುಕೂಲವಾಗಬಲ್ಲ ರೋಬೊಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಇವುಗಳು ಮುಖದ ಗುರುತುಶಕ್ತಿ ಹೊಂದಿದ್ದು,  ಸಂವಹನ ನಡೆಸಬಲ್ಲವು.

ಯುಒ ಅಲ್ಬೆರ್ಟ್‌ ರೋಬೊಟ್‌: ಮಕ್ಕಳ ಶಿಕ್ಷಣ ಗಮನದಲ್ಲಿಟ್ಟುಕೊಂಡು ಇವುಗಳನ್ನು ರೂಪಿಸಲಾಗಿದೆ. ಹಲವು ವರ್ಷಗಳ ಹಿಂದೆಯೇ ಇವುಗಳನ್ನು ಪರಿಚಯಿಸಲಾಗಿದ್ದರೂ ಪ್ರತಿ ವರ್ಷ ಹೊಸತನದಿಂದ ಇವು ಸುದ್ದಿ ಮಾಡುತ್ತಿವೆ. ಜಪಾನ್, ಅಮೆರಿಕ ಮತ್ತು ಯುರೋಪ್‌ಗಳಲ್ಲಿ ಇವು ಕಾಣಸಿಗುವುದು ಸಾಮಾನ್ಯ. ಮೊಬೈಲ್ ತಂತ್ರಜ್ಞಾನ ಕಂಪನಿ ಮೆಗಾ ಕಾರ್ಪ್‌ ಸಾಫ್ಟ್‌ಬ್ಯಾಂಕ್‌ ಇವುಗಳನ್ನು ಇವುಗಳನ್ನು ತಯಾರು ಮಾಡಿದೆ. ಜಪಾನ್‌ ರಾಜಧಾನಿ ಟೋಕಿಯೊದ ಹನೇದಾ ವಿಮಾನ ನಿಲ್ದಾಣದಲ್ಲಿ ಈ ರೋಬೊಟ್‌ಗಳನ್ನು ಬಳಸಿಕೊಳ್ಳಲಾಗಿದೆ.

ವಾಕರ್ ರೋಬೊಟ್‌: ವಿಶ್ವದ ಮೊದಲ ವಾಣಿಜ್ಯ ರೋಬೊಟ್‌ ಇದು. ಸಿಇಎಸ್‌ನಲ್ಲಿ ವಿವಿಧ ರೀತಿಯ ವಾಕರ್ ರೋಬೊಟ್‌ಗಳನ್ನು ಪ್ರದರ್ಶನ

ಕ್ಕಿಡಲಾಗಿತ್ತು. ಸಿಇಎಸ್‌ ಇವುಗಳಿಗೆ ಹೊಸ ರೀತಿಯ ವೇದಿಕೆಯನ್ನು ಒದಗಿಸಿತ್ತು. ‘ಮನೆ ಬಳಕೆಯ ರೋಬೊಟ್‌ಗಳ ಬಗ್ಗೆ ತಿಳಿದುಕೊಳ್ಳಲು ಸಿಇಎಸ್‌ನಲ್ಲಿ ಹೆಚ್ಚಿನ ಅವಕಾಶಗಳಿದ್ದವು’ ಎಂದು ಉತ್ತರ ಅಮೆರಿಕದ UBTECH ನ ಪ್ರಧಾನ ವ್ಯವಸ್ಥಾಪಕ ಜಾನ್‌ ರೀ ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry