ಗುಡ್ ಮಾರ್ನಿಂಗ್ ... ಸಂದೇಶಗಳೇ ಮಾರಕ!

7

ಗುಡ್ ಮಾರ್ನಿಂಗ್ ... ಸಂದೇಶಗಳೇ ಮಾರಕ!

Published:
Updated:
ಗುಡ್ ಮಾರ್ನಿಂಗ್ ... ಸಂದೇಶಗಳೇ ಮಾರಕ!

ಇದು ಸ್ಮಾರ್ಟ್‌ಫೋನ್ ಯುಗ! ಸ್ಮಾರ್ಟ್‌ಫೋನ್‌ಗಳು ಅಗ್ಗದ ಬೆಲೆಯಲ್ಲಿ ದೊರೆಯಲಾರಂಭಿಸಿದ ಮೇಲಂತೂ ಎಲ್ಲರ ಕೈಯಲ್ಲಿ  ಇವುಗಳ ಅಬ್ಬರವೇ ಅಬ್ಬರ! ಇನ್ನು ಇಂಟರ್‌ನೆಟ್‌ ಡೇಟಾ ಸೇವೆಯೂ ಅಗ್ಗವಾದ ಮೇಲೆ ಮೊಬೈಲ್ ಫೋನ್‌ಗಳಲ್ಲಿ ಫೋಟೋ, ವಿಡಿಯೊಗಳೇ ತುಂಬಿ ತುಳುಕುತ್ತಿವೆ.

ಅದರಲ್ಲೂ ಭಾರತೀಯರು ಪ್ರತಿ ಮುಂಜಾನೆ ಶುಭ ಮುಂಜಾವು ಸಂದೇಶದಿಂದ ಹಿಡಿದು ರಾತ್ರಿ ಮಲಗುವವರೆಗೂ ವಿವಿಧ ಬಗೆಯ ಸಂದೇಶಗಳನ್ನು ಕಳುಹಿಸುತ್ತಿರುತ್ತಾರೆ. ಈ ರೀತಿ ಮಾಡುವುದರಿಂದ ಸ್ಮಾರ್ಟ್‌ಫೋನ್‌ಗಳಲ್ಲಿನ ಜಾಗವನ್ನು ಇಂತಹ ಸಂದೇಶಗಳೇ ತಿಂದು ಹಾಕುವುದರಿಂದ ಮೊಬೈಲ್ ಫೋನ್‌ಗಳ ಕಾರ್ಯಕ್ಷಮತೆ ನಿಧಾನವಾಗುವುದು, ಇಲ್ಲವೇ ಮೊಬೈಲ್ ಹ್ಯಾಂಗ್ ಆಗುತ್ತದೆ.

ಪದೇ ಪದೇ ಮೊಬೈಲ್ ಹ್ಯಾಂಗ್ ಆಗುವುದಕ್ಕೆ ಚಿತ್ರ, ವಿಡಿಯೊ, ಜಿಫ್ ಸಂದೇಶಗಳೇ ಕಾರಣ ಎಂದು ಗೂಗಲ್ ಸಂಸ್ಥೆ ತಿಳಿಸಿದೆ. ಭಾರತದ 3 ಸ್ಮಾರ್ಟ್‌ಫೋನ್ ಬಳಕೆದಾರರಲ್ಲಿ ಒಬ್ಬರ ಫೋನ್ ಇಂತಹ ಸಂದೇಶಗಳಿಂದಾಗಿಯೇ ಹ್ಯಾಂಗ್ ಆಗುವ ಮೂಲಕ ಕಾರ್ಯ ನಿರ್ವಹಣೆಗೆ ಅಡ್ಡಿಯಾಗುತ್ತದೆ ಎಂದು ಗೂಗಲ್ ಸಂಶೋಧಕರ ತಂಡವೊಂದು ಪತ್ತೆ ಮಾಡಿದೆ.

ಸೂರ್ಯೋದಯ, ಸೂರ್ಯಾಸ್ತ, ಮುದ್ದಾದ ಮಕ್ಕಳು, ಹೂವುಗಳು, ಹಕ್ಕಿಗಳು ಸೇರಿದಂತೆ ಇತರೆ ಚಿತ್ರಗಳೊಂದಿಗೆ ಸಂದೇಶಗಳು ಹರಿದು ಬರುತ್ತವೆ. ಇವುಗಳೇ ನಮ್ಮ ಮೊಬೈಲ್ ಫೋನ್ ಅನ್ನು ಹ್ಯಾಂಗ್ ಮಾಡುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry