7

ಮನೆಯಲ್ಲಿಯೇ ಆದಾಯ, ಜಾತಿ ಪ್ರಮಾಣಪತ್ರ ಪ್ರಿಂಟ್ ಪಡೆಯುವ ವ್ಯವಸ್ಥೆ

Published:
Updated:
ಮನೆಯಲ್ಲಿಯೇ ಆದಾಯ, ಜಾತಿ ಪ್ರಮಾಣಪತ್ರ ಪ್ರಿಂಟ್ ಪಡೆಯುವ ವ್ಯವಸ್ಥೆ

ಬೆಂಗಳೂರು: ನಾಡ ಕಚೇರಿ ವೆಬ್‌ಸೈಟ್‌ ಮೂಲಕ ಸಿದ್ಧ ಪ್ರಮಾಣಪತ್ರವನ್ನು ಯಾವುದೇ ಸ್ಥಳದಿಂದ, ಯಾವುದೇ ಸಮಯದಲ್ಲಿ ಪ್ರಿಂಟ್‌ ‍ಪಡೆಯುವ ವ್ಯವಸ್ಥೆ ಸಾರ್ವಜನಿಕರಿಗೆ ಲಭ್ಯವಿದೆ.

ದೇಶದಲ್ಲಿ ಇದೇ ಮೊದಲ ಬಾರಿಗೆ ಈ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಈ ಕುರಿತು ಸರ್ಕಾರದಿಂದ ಅಧಿಕೃತ ಪ್ರಕಟಣೆ ಹೊರಬಂದಿದೆ.

800 ಗ್ರಾಮೀಣ ನಾಡ ಕಚೇರಿಗಳಿಂದ ಕಂದಾಯ ಇಲಾಖೆ ಪ್ರತಿ ವರ್ಷ ಸುಮಾರು 1 ಕೋಟಿ ಜಾತಿ ಪ್ರಮಾಣಪತ್ರ, ಆದಾಯ ಹಾಗೂ ವಾಸಸ್ಥಳ ಪ್ರಮಾಣಪತ್ರಗಳನ್ನು ವಿತರಿಸುತ್ತಿದೆ.

ನಾಡ ಕಚೇರಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಮಾಣಪತ್ರ ಪ್ರಿಂಟ್‌ ಪಡೆಯಲು ಲಿಂಕ್‌: www.nadakacheri.karnataka.gov.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry