ಆರೋಗ್ಯಕ್ಕೆ ಶಾಂತಿಯ ಮಕರಂದ

7

ಆರೋಗ್ಯಕ್ಕೆ ಶಾಂತಿಯ ಮಕರಂದ

Published:
Updated:
ಆರೋಗ್ಯಕ್ಕೆ ಶಾಂತಿಯ ಮಕರಂದ

ಜೀವನ ಎನ್ನುವುದು ಒಂದು ಸುಂದರ ಹೂಬನ. ಈ ಹೂಬನದಲ್ಲಿ ಸದಾ ಸುಂದರವಾದ ಹೂಗಳು ಅರಳಿ ನಗುತ್ತಿರಬೇಕು. ಹೀಗೆ ಜೀವನದ ಹೂಬನ ಅರಳಿ ನಗುತ್ತಿರಬೇಕು ಎಂದರೆ ಕಾಯಿಲೆಗಳು ನಮ್ಮಿಂದ ದೂರಾಗಬೇಕು. ಕಾಯಿಲೆಯಿಲ್ಲದ ಸಮೃದ್ಧ ಜೀವನ ನಮ್ಮದಾದರೆ ನಾವು ಪರಿಪೂರ್ಣ ಜೀವನ ನಡೆಸಲು ಸಾಧ್ಯ.

ಇನ್ನು ಜೀವನವನ್ನು ಆರೋಗ್ಯಕರವಾಗಿ, ಸಂತೋಷದಿಂದ ಹಾಗೂ ರೋಮಾಂಚಕತೆಯಿಂದ ಕಳೆಯಬೇಕೆಂದರೆ ನಾವೇನು ಮಾಡಬೇಕು - ಎಂಬ ಪ್ರಶ್ನೆ ಮೂಡಬಹುದು. ಆದರೆ ಆ ಪ್ರಶ್ನೆಗೆ ನಮ್ಮಲ್ಲೇ ಉತ್ತರವಿದೆ. ದೇಹ ಆರೋಗ್ಯವಿರಬೇಕು ಎಂದರೆ ಮೊದಲು ಮನಸ್ಸು ಶಾಂತವಾಗಿರಬೇಕು. ಹಿರಿಯರೊಬ್ಬರು ಹೇಳಿರುವಂತೆ ’ಯಾವಾಗ ಮನಸ್ಸು ವಟಗುಟ್ಟುವುದನ್ನು ನಿಲ್ಲಿಸುತ್ತದೋ, ಆಗ ಅದು ಶಾಂತವಾಗುತ್ತದೆ. ಮನಸ್ಸಿಗೆ ನಾವು ಒತ್ತಡವನ್ನು ನೀಡಬಾರದು, ಮನಸ್ಸು ಸದಾ ಶಾಂತಿಯ ಮಂತ್ರವನ್ನಷ್ಟೇ ಪಠಿಸುತ್ತಿರಬೇಕು.’

ಇನ್ನು, ಮನಸ್ಸಿನ ಅಧಿಕೃತ ಸ್ಥಿತಿಯ ಬಗ್ಗೆ ತಿಳಿಯೋಣ. ಸ್ಥಿರವಾಗಿ, ಸುಂದರವಾಗಿ, ಶಾಂತಿಯಿಂದ ಕೂಡಿರುವುದೇ ಮನಸ್ಸಿನ ಅಧಿಕೃತ ಸ್ಥಿತಿ. ಆ ಸ್ಥಿತಿ ಹೇಗೆಂದರೆ ವಿಶಾಲವಾದ ಸಾಗರದಲ್ಲಿ ಆಳವಾದ ತಿಳಿನೀರು ಇದ್ದಂತೆ. ಈ ನೀರು ಸ್ಥಿರವಾಗಿ, ಮೌನವಾಗಿ, ನಿಂತಲ್ಲೇ ನಿಂತು ದೈವಿಕ ಶಾಂತತೆಯಿಂದ ರೇಷ್ಮೆಯಷ್ಟು ನಯವಾಗಿರುತ್ತದೆ. ನೀವು ಯಾವಾಗ ಈ ನೀರಿನಲ್ಲಿ ಧುಮುಕುತ್ತಿರೋ ಆಗ ಆ ನೀರು ಕಲುಕುತ್ತದೆ. ಶಾಂತತೆಯಿಂದ ನಿಂತಿದ್ದ ನೀರಿನಲ್ಲಿ ಅಲೆಗಳುಂಟಾಗುತ್ತವೆ. ಯಾವಾಗ ನೀರಿನೊಳಗೆ ನಾವು ಧುಮುಕುತ್ತೀವೋ ಆಗ, ನಾವು ಆ ನೀರಿನೊಳಗೆ ಒಂದಾಗಿ ಬಿಡುತ್ತೇವೆ. ನೀರಿನ ಮಟ್ಟವನ್ನು ಮೀರಿ ನಾವು ಅದರೊಳಗೆ ಇಳಿದು ಹೋಗುತ್ತೇವೆ. ನೀರು ನಮ್ಮನ್ನು ನಾವು ಅದರಾಳದಲ್ಲಿ ತೇಲುವಂತೆ ಮಾಡುತ್ತದೆ. ನೀರಿನೊಳಗೆ ಆಳವಾಗಿ ಇಳಿಯುತ್ತಾ ಹೋದಂತೆ ನಮಗೆ ಆಮ್ಲಜನಜಕದ ಅವಶ್ಯಕತೆ ಎದುರಾಗುತ್ತದೆ. ಆಗ ನಮಗೆ ಹೊರ ಜಗತ್ತಿನ ಅರಿವಾಗುತ್ತದೆ. ಆಮ್ಲಜನಕದ ಮಹತ್ವ ಅರಿವಾಗುತ್ತದೆ. ಹಾಗೆಯೇ ಮನಸ್ಸು ಕೂಡ. ಮನಸ್ಸು ಒಂದು ಮಟ್ಟವನ್ನು ಮೀರಿ ಹೋದಾಗ ನಮ್ಮ ವಾಸ್ತವ ಜಗತ್ತಿನ ಅರಿವು ನಮಗಾಗುತ್ತದೆ.

ನಮ್ಮ ಮನಸ್ಸು ಶಾಂತವಾಗಿರಲು ಆತ್ಮವು ಹೊರಜಗತ್ತನ್ನು ಪ್ರೀತಿಸಲು ಆರಂಭಿಸಬೇಕು. ಯಾವಾಗ ಮನಸ್ಸಿನಾಳದಿಂದ ಹೊರಗಡೆ ಯೋಚಿಸಲು ಆರಂಭಿಸುತ್ತೀರೋ ಆಗ ನಿಮ್ಮ ಸುತ್ತಲಿನ ಜಗತನ್ನೂ ಪ್ರೀತಿಸಲು ಆರಂಭಿಸುತ್ತೀರಿ. ಹಾಗಾಗಿ ನಿಮ್ಮೊಳಗೆ ಮಾತ್ರವಲ್ಲದೇ, ನಿಮ್ಮ ಸುತ್ತಲಿನ ಜಗತ್ತನ್ನು ಪ್ರೀತಿ, ಸೌದರ್ಹತೆ ಹಾಗೂ ಶಾಂತಿಯಿಂದ ಕೂಡಿರುವಂತೆ ನೋಡಿಕೊಳ್ಳಬೇಕು. ಮನಸ್ಸು ಹಾಗೂ ದೇಹ ಯಾವಾಗಲೂ ಶಾಂತಿಯನ್ನು ಬಯಸುತ್ತದೆ. ಅದೇ ಸಂಪೂರ್ಣ ಜೀವನಾನಂದ. ನಮ್ಮ ಜೀವನ ಆರೋಗ್ಯ ಎಂಬ ಅದ್ಭುತವಾದ ಮಕರಂದವನ್ನು ಎಂದಿಗೂ ಬಯಸುತ್ತಿರುತ್ತದೆ. ಅದುವೇ ಜೀವನದ ಸಮತೋಲನ.

ಯಾವಾಗ ಮನಸ್ಸು ನಿರಾಳವಾಗಿರುತ್ತದೋ ಆಗ ದೇಹವು ವಿಶ್ರಾಂತ ಮನೋಭಾವದಿಂದ ಶಾಂತವಾಗಿರುತ್ತದೆ. ಆಗ ಎಲ್ಲ ಚಿಂತೆ ಹಾಗೂ ದುಗುಡಗಳು ನಮ್ಮಿಂದ ದೂರವಾಗುತ್ತವೆ. ಮನಸ್ಸಿಗೆ ಶಾಂತಿ ದೊರಕಿದಾಗ ಅದು ಸಿಹಿಯನ್ನು ಬಯಸುವುದಿಲ್ಲ. ಆಗ ಮಧುಮೇಹವೂ ಬಾಧಿಸುವುದಿಲ್ಲ. ದೈಹಿಕಸ್ಥಿತಿ ಸಮತೋಲನದಲ್ಲಿದ್ದರೆ ದೇಹದಲ್ಲಿ ಸಕ್ಕರೆಯ ಮಟ್ಟ ಏರುಪೇರಾಗುವುದಿಲ್ಲ. ಆಗ ಇನ್ಸುಲಿನ್‌ನ ಅಗತ್ಯವೂ ಇರುವುದಿಲ್ಲ.

ಮಧುಮೇಹದಿಂದ ದೇಹವನ್ನು ಕಾಪಾಡಲು ನಾವು ಬರಿ ಇನ್ಸುಲಿನ್‌ನ ಮೊರೆ ಹೋಗುವ ಅಗತ್ಯವಿಲ್ಲ. ಅದಕ್ಕೆ ತಕ್ಕುದಾದ ಆಹಾರ ಸೇವನೆಯಿಂದಲೂ ಇದನ್ನು ಸಮತೋಲನದಲ್ಲಿಡಬಹುದು. ಬಿಟ್‌ರೂಟ್‌, ಬ್ರೊಕೋಲಿ, ಕ್ಯಾಬೇಜ್‌, ಕ್ಯಾರೇಟ್‌, ಸೌತೆಕಾಯಿ, ಬದನೆಕಾಯಿ, ಹಸಿರುಸೊಪ್ಪುಗಳು, ಅಣಬೆ, ಒಕ್ರಾ, ದೊಣ್ಣೆಮೆಣಸು, ಗಜ್ಜರಿ, ಟೊಮೆಟೊ ಮುಂತಾದ ತರಕಾರಿಗಳು ಕೂಡ ಇದಕ್ಕೆ ಸಹಾಯ ಮಾಡುತ್ತವೆ. ಮೊಟ್ಟೆ, ಕೋಳಿಮಾಂಸ, ಸೋಯಾಬೀನ್‌, ಬೀಜಗಳು, ದ್ವಿದಳ ಧಾನ್ಯಗಳಲ್ಲೂ ಇರುವ ಪ್ರೊಟೀನ್ ಅಂಶಗಳು ನಮಗೆ ಸಹಾಯ ಮಾಡುತ್ತವೆ. ತಾಜಾ ಹಣ್ಣುಗಳಾದ ನಿಂಬೆ, ರಾಸ್ಬೆರ್ರಿ, ದ್ರಾಕ್ಷಿ, ತೆಂಗು, ಬ್ಲಾಕ್‌ಬೆರ್ರಿ, ಸ್ಟ್ರಾಬೆರ್ರಿ, ಪಪ್ಪಾಯ, ಸಪೋಟ ಕೂಡ ದೇಹದಲ್ಲಿ ಚೈತನ್ಯ ಮೂಡಿಸಲು ಸಹಾಯ ಮಾಡುತ್ತವೆ. ಈ ಮೇಲಿನವುಗಳಲ್ಲಿ ಸರಿ ಹೊಂದುವ, ಹಾಗೂ ಇಷ್ಟವಾದವುಗಳನ್ನು ಆಯ್ಕೆ ಮಾಡಿಕೊಳ್ಳಿ. ಇದರಿಂದ ನಿಮ್ಮ ದೈಹಿಕ ಆರೋಗ್ಯವನ್ನು ಸಮತೋಲನದಲ್ಲಿರಿಸಿಕೊಳ್ಳಿ.

ನಿಧಾನವಾಗಿ ಸಿಹಿ ತಿಂಡಿಗಳಿಂದ ದೂರವಾಗಿ. ಬಿಸ್ಕತ್ತಿನಂತೆ ಪ್ಯಾಕೆಟ್‌ನಲ್ಲಿ ಇರಿಸಲಾಗುವ ಸಿಹಿತಿನಿಸುಗಳಿಂದ ದೂರವಾಗುತ್ತೇನೆ ಎಂಬ ದೃಢ ನಿರ್ಧಾರ ಮಾಡಿ. ಒಂದೊಂದೆ ತಿನಿಸುಗಳಿಂದ ದೂರವಾಗುತ್ತಾ ಬಂದರೆ ಕ್ರಮೇಣ ಅವುಗಳಿಂದ ಸಂಪುರ್ಣವಾಗಿ ದೂರವಾಗಲು ಸಾಧ್ಯ.

ಮನುಷ್ಯನ ಜೀವನದಲ್ಲಿ ಒತ್ತಡವೂ ಕೂಡ ದೈಹಿಕವಾಗಿ ಆರೋಗ್ಯ ಹದಗೆಡುವಂತೆ ಮಾಡುತ್ತದೆ. ಒತ್ತಡ ಮನುಷ್ಯನಲ್ಲಿ ಕೊಲೆಸ್ಟ್ರಾಲ್ ಅಂಶವನ್ನು ಬಿಡುಗಡೆ ಮಾಡುತ್ತದೆ. ಹಾರ್ಮೋನ್ ಸಕ್ಕರೆಯ ಮಟ್ಟವನ್ನು ಹೆಚ್ಚುವಂತೆ ಮಾಡುತ್ತದೆ. ಮನಸ್ಸು ಆರಾಮದಿಂದಿದ್ದರೆ ದೇಹವೂ ಆರಾಮವಾಗಿರುತ್ತದೆ. ಆಗ ಕೊಲೆಸ್ಟ್ರಾಲ್ ಕೂಡ ಆರಾಮವಾಗಿರುತ್ತದೆ. ಉತ್ತಮವಾದ ನಿದ್ದೆಯೇ ನಮ್ಮನ್ನು ಚುಚ್ಚುಮದ್ದಿನಿಂದ ದೂರ ಉಳಿಯುವಂತೆ ಮಾಡುವ  ಒಂದು ಸಾಧನ. ಪ್ರತಿದಿನ ವ್ಯಾಯಾಮ ಮಾಡಿ.

ಇದರೊಂದಿಗೆ ನಿಮ್ಮ ಸಿಟ್ಟಿನ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಿ. ನಿಮಗೆ ಕೇಳಿಸುವ ನಿಮಗೆ ಇಷ್ಟವಿಲ್ಲದ ಸ್ವರದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಆ ಸ್ವರ ನಿಮ್ಮಲ್ಲಿ ಸ್ವಾರ್ಥವಾಗಿ, ಭಿನ್ನವಾಗಿ, ಅಹಸ್ಯವಾಗಿ, ನೋವನ್ನುಂಟು ಮಾಡಬಹುದು. ಆದರೂ ಅದರ ಬಗ್ಗೆ ಯೋಚಿಸಬೇಡಿ.

ಒಬ್ಬ ಮನುಷ್ಯ ನಾನು ಎಲ್ಲರಿಗಿಂತ ಉತ್ತಮನಾಗಿರಬೇಕು, ನಾನೇ ಗೆಲ್ಲಬೇಕು, ಎಲ್ಲರೂ ನನ್ನನ್ನೇ ಹೊಗಳಬೇಕು ಎಂದು ಅಂದುಕೊಳ್ಳುತ್ತಾನೋ, ಹಾಗೇ ಪ್ರತಿಯೊಬ್ಬರು ಬಯಸುತ್ತಿರುತ್ತಾರೆ. ಮೊದಲು ಮನಸ್ಸು, ಹೃದಯ, ಸ್ನಾಯುಗಳು, ಅಪಧಮನಿಗಳು, ಅಂಗಗಳು ಹಾಗೂ ನರಗಳು – ಇವುಗಳನ್ನು ಶುದ್ಧವಾಗಿರಿಸಿಕೊಳ್ಳಿ. ಹೃದಯ ತಂಪಾಗಿ, ಸಿಹಿಯಾಗಿ, ವಿರಾಮವಾಗಿ, ಶಾಂತಿಯಿಂದ ಇರುವುದರಿಂದ ಮನಸ್ಸು ಸಮತೋಲನದಲ್ಲಿರುತ್ತದೆ.

ಮನಸ್ಸನ್ನು ಅವಕಾಶಗಳ ಬಾಗಿಲುಗಳಿಗೆ ತೆರೆಯುವಂತೆ ನೋಡಿಕೊಳ್ಳಿ. ‌‌ಇಡೀ ವರ್ಷ ಹೊಸ ಹೊಸ ಅವಕಾಶಗಳು ನಿಮ್ಮ ಪಾಲಿಗೆ ಬರಲಿ. ಈ ಎಲ್ಲಾ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಬದುಕುವ ದಾರಿಯನ್ನು ಕಂಡುಕೊಳ್ಳಿ. ಎಂತಹ ಪರಿಸ್ಥಿತಿಯಲ್ಲೂ ಮನಸ್ಸನ್ನು ಆಹ್ಲಾದಕರವನ್ನಾಗಿರಿಸಿಕೊಳ್ಳಿ. ಸಂತೋಷ, ದಯೆ, ಸೌಹಾರ್ದ, ಕೃತಜ್ಞತೆ, ಶಾಂತಿ ಹಾಗೂ ಜ್ಞಾನದ ಋತುವಿನೊಂದಿಗೆ ಸುಂದರವಾಗಿ ಬದುಕಿ. ಇವೆಲ್ಲ ನನ್ನಿಂದ ಸಾಧ್ಯ ಎಂಬ ದೃಢ ನಿರ್ಧಾರದೊಂದಿಗೆ ಸುಂದರ ಬದುಕನ್ನು ಸಾಗಿಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry