ಕತ್ತೆಗೆ ಅವಮಾನ!

7

ಕತ್ತೆಗೆ ಅವಮಾನ!

Published:
Updated:

ಹಿರಿಯ ರಾಜಕಾರಣಿ ಶ್ರೀನಿವಾಸ ಪ್ರಸಾದ್ ಅವರು ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆ ಹಾಗೂ ಮಹದೇವಪ್ಪ ಅವರನ್ನು ಕತ್ತೆಗೆ ಹೋಲಿಸಿರುವ ಕುರಿತು ನಂಜುಂಡಸ್ವಾಮಿ ‘ಬುದ್ಧ ಮತ್ತು ಭಜನೆ’ ಎಂಬ ಪತ್ರ ಬರೆದಿದ್ದಾರೆ (ವಾ.ವಾ., ಜ.30).

ಈ ಸಂದರ್ಭದಲ್ಲಿ ಬೀಚಿ ಅವರು ತಮ್ಮ ಮಾನಸಪುತ್ರ ತಿಮ್ಮನನ್ನು ಅವನ ಅಪ್ಪ ‘ಕತ್ತೆ’ ಎಂದು ಕರೆದಿರುವ ಬಗ್ಗೆ ಬರೆದಿರುವ ಕವನ ನೆನಪಾಗುತ್ತದೆ.

ಕತ್ತೆ... ಕತ್ತೆ... ಎಂದು ಮಾನವನ ಅಂದು

ಕತ್ತೆಯ ಮಾನವಂ ಏಕೆ ಕಳೆಯುವಿರಯ್ಯಾ

ಕತ್ತೆ ಕದಿಯದು, ಕತ್ತೆ ಹುಸಿನುಡಿಯದು

ಕತ್ತೆ ಎನ್ನಾತ್ಮ ಕಾಣ, ಕತ್ತೆಯ ತಂದೆ...!

ಪಾಪ... ಮಾನವರ ತಪ್ಪುಗಳಿಗೆ ಮಾನವನನ್ನು ಕತ್ತೆ ಎಂದು ಕರೆದು ಅದರ ಮಾನವನ್ನೇಕೆ ಕಳೆಯಬೇಕು, ಅಲ್ಲವೇ?

ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry