ವಿರೋಧಾಭಾಸ!

7

ವಿರೋಧಾಭಾಸ!

Published:
Updated:

ಐಎಸ್‍ಐ ಗುರುತಿನ ಹೆಲ್ಮೆಟ್ ಧರಿಸದಿದ್ದರೆ ‘ದಂಡ ವಿಧಿಸುವ ಅಭಿಯಾನ’ವನ್ನು ಆರಂಭಿಸುವುದಾಗಿ ಬೆಂಗಳೂರು ಪೋಲಿಸರು ಹೇಳಿದ್ದರು. ಆದರೆ ಭಾರತೀಯ ಮಾನಕ ಸಂಸ್ಥೆಯು ಹೆಲ್ಮೆಟ್‍ನ ಗುಣಮಟ್ಟವನ್ನು ಪ್ರಯೋಗಾಲಯದಲ್ಲಿಯೇ ಪರೀಕ್ಷಿಸಿ ಸಾಬೀತುಪಡಿಸಬೇಕಾಗುತ್ತದೆ

ಎಂಬ ವರದಿಯನ್ನು ನೀಡಿದ್ದರಿಂದ, ಸದ್ಯದ ಮಟ್ಟಿಗೆ ‘ದಂಡಪ್ರಯೋಗ’ವನ್ನು ಮುಂದೂಡಿದ್ದಾರೆ.

ಆದರೆ ಮೈಸೂರಿನ ಪೊಲೀಸ್ ಆಯುಕ್ತರು ಮಾತ್ರ ಭಾರತೀಯ ಮಾನಕ ಸಂಸ್ಥೆ ಏನೇ ಹೇಳಿದ್ದರೂ ತಾವು ಮಾತ್ರ ಫೆಬ್ರುವರಿ ತಿಂಗಳ ಆರಂಭದಿಂದ ‘ಅಭಿಯಾನ’ವನ್ನು ಮಾಡಿಯೇ ತೀರುವುದಾಗಿ ಹೇಳಿದ್ದಾರೆ! ದೇಶ ಒಂದು – ಕಾನೂನು ಒಂದು, ಆದರೆ ಅರ್ಥೈಸುವಿಕೆ, ಪರಿಣಾಮ, ಪ್ರಭಾವ ವಿಭಿನ್ನ. ಎಂಥ ವಿರೋಧಾಭಾಸ!

ಡಾ. ಚನ್ನು ಅ. ಹಿರೇಮಠ, ರಾಣೆಬೆನ್ನೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry